ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಬಿಆರ್ಟಿಎಸ್ ಕಾರಿಡಾರ್ ಪರಿಸರಸ್ನೇಹಿ

Mainashree
Updated On : 5 Jun 2013, 11:17 am

ಧಾರವಾಡ: ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಕಾರಿಡಾರ್ ಯೋಜನೆಯಲ್ಲಿ ಪರಿಸರ ಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತಂತೆ ಧಾರವಾಡದಲ್ಲಿ ನಗರದ ಪರಿಸರವಾದಿಗಳ ಜೊತೆ ಬಿಆರ್‌ಟಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ. ನೂರ್ ಮನ್ಸೂರ್ ಈಚೆಗೆ ವಿಶೇಷ ಸಭೆ ನಡೆಸಿದರು.
ಮಹತ್ವದ ಈ ಯೋಜನೆ ಕುರಿತು ನಗರ ಭೂಸಾರಿಗೆ ಆಯುಕ್ತರಾದ ಮಂಜುಳಾ ವಿ. ಅವರಿಂದ ಸೂಕ್ತ ಸಲಹೆ ಹಾಗೂ ನಿರ್ದೇಶನ ಪಡೆಯುತ್ತಿದ್ದೇವೆ. ಯೋಜನೆಯ ಭಾಗವಾಗಿರುವ ಪರಿಸರ ನಿರ್ವಹಣೆ ಯೋಜನೆ ಕುರಿತು ಚರ್ಚಿಸಿದ್ದು, ರಸ್ತೆಯ ಬದಿಗೆ ಸಾಲು ಸಸಿಗಳನ್ನು ನೆಡಲು ಹಾಗೂ ನೆಡುತೋಪು ರಚಿಸಲು ಹಾಗೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪಾರ್ಕ್‌ಗಳ ಅಭಿವೃದ್ಧಿ ಮತ್ತು ಕಾಯ್ದಿಟ್ಟ ಅರಣ್ಯಪ್ರದೇಶ, ಸಂಜೀವಿನಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಯೋಜನೆಯನ್ನು ತಯಾರಿಸಲಾಗಿದೆ. ಅವಳಿ ನಗರಗಳಲ್ಲಿ ಬರುವ ಆಯ್ದ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ಸಸಿಗಳನ್ನು ನೆಡಲು ಯೋಜನೆ ಹಾಕಿಕೊಂಡಿದ್ದು, ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಲಾಗಿದೆ ಎಂದು ನೂರ್ ಮನ್ಸೂರ್ ಸಭೆಗೆ ತಿಳಿಸಿದರು.
ಸಸಿಗಳನ್ನು ನೆಡಲು ಸಿಗುವ ಸ್ಥಳಾವಕಾಶದ ಕುರಿತು ಪರಿಸರವಾದಿಗಳಿಂದ ಮಾಹಿತಿ ಪಡೆದ ಅವರು, ಶಾಲೆ-ಕಾಲೇಜು, ಮಹಾನಗರ ಪಾಲಿಕೆ ಹಾಗೂ ಹುಡಾ ವ್ಯಾಪ್ತಿಯಲ್ಲಿ ಬರುವ ಉದ್ಯಾನವನಗಳಲ್ಲಿ ಸಿಗುವ ಸ್ಥಳಗಳು ಹಾಗೂ ಅಲ್ಲಿ ನೆಡಲು ಉದ್ದೇಶಿಸಿರುವ ಸಸಿಗಳ ಕುರಿತು ಚರ್ಚಿಸಲಾಯಿತು. ಬಿಆರ್‌ಟಿಎಸ್ ಕಾರಿಡಾರ್ ರಸ್ತೆಯ ಬದಿಯಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತಹ ಸಸಿಗಳನ್ನು ನೆಡಲು ತೀರ್ಮಾನಿಸಿರುವ ಕುರಿತು ಸಭೆಯಲ್ಲಿದ್ದ ಪರಿಸರವಾದಿಗಳಿಗೆ ಅವರು ಮಾಹಿತಿ ನೀಡಿದರು. ಅಲ್ಲದೇ, ಪರಿಣಿತ ಪರಿಸರವಾದಿಗಳಿದ್ದ ಸಮಿತಿ ರಚಿಸಲು ನಿರ್ಧರಿಸಲಾಯಿತು.
ಪರಿಸರವಾದಿಗಳಾದ ಮುಕುಂದ ಮೈಗೂರ, ಡಾ. ಪ್ರಕಾಶ ಭಟ್, ಶಂಕರ ಕುಂಬಿ, ಡಾ. ತಪಶಟ್ಟಿ ಮಹಾಂತೇಶ, ಕೆಆರ್ಟಿಸಿಎಲ್ ವಿಶೇಷಾಧಿಕಾರಿಗಳು (ಭೂಸ್ವಾಧೀನ) ವಿ.ಎ. ಮಾಚಕನೂರ, ವಿಭಾಗೀಯ ಅಭಿಯಂತ ವಿ.ಜಿ. ಪಾಟೀಲ, ಬಿಆರ್ಟಿಎಸ್ ಕಾರಿಡಾರ್ ಕಂಪನಿ ಉಪ ವ್ಯವಸ್ಥಾಪಕ ನಿರ್ದೇಶಕರುಗಳಾದ ಶ್ರೀನಿವಾಸ ಗೌಡ, ಬಸವರಾಜ ಕೆರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement