ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆಯಿಂದ ಸಮ್ಮೇಳನ

Mainashree
Updated On : 6 Jun 2013, 10:52 am

ಧಾರವಾಡ: ಎಸ್‌ಡಿಎಂ ದಂತ ವೈದ್ಯಕೀಯ ಮಹಾವಿದ್ಯಾಲಯದ ವತಿಯಿಂದ ಐಎಸಿಡಿಇ ಮತ್ತು ಐಇಎಸ್ ಸ್ನಾತಕೋತ್ತರ ಸಮ್ಮೇಳನ ಜೂ. 7ರಿಂದ 9ರವರೆಗೆ ಇಲ್ಲಿನ ವೀರೇಂದ್ರ ಹೆಗ್ಗೆಡೆ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಂತ ಮಹಾವಿದ್ಯಾಲಯದ ಪ್ರಾಶುಂಪಾಲ ಡಾ. ಶ್ರೀನಾಥ ಠಾಕೂರ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಈ ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಐಎನ್‌ಎಇ ಪ್ರಾಧ್ಯಾಪಕ ಪ್ರೊ. ಕೆ.ವಿ.  ರಾಘವನ್ ಮತ್ತು ಭಾರತೀಯ ದಂತ ಮಂಡಳಿ ಅಧ್ಯಕ್ಷ ಡಾ. ದಿಬೆಂದು ಮಜೂಮದಾರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಪ್ರಸ್ತುತ ದಂತ ವೈದ್ಯಕೀಯದಲ್ಲಿ ಹತ್ತು ಹಲವಾರು ಬೆಳವಣಿಗೆಗಳು ಆಗಿವೆ. ಅವುಗಳ ಕುರಿತು ಉತ್ತರ ಕರ್ನಾಟಕದ ಜನತೆಗೆ ತಲುಪಿಸುವ ಹಾಗೂ ಇಲ್ಲಿಯ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸುವ ನಿಟ್ಟಿನಲ್ಲಿ ಮೂರು ದಿನಗಳ ವರೆಗೆ ಈ ಸಮ್ಮೇಳನ ನಡೆಯಲಿದೆ ಎಂದು ಡಾ. ಠಾಕೂರ್‌ತಿಳಿಸಿದರು.
ದೇಶದ ವಿವಿಧೆಡೆಗಳಿಂದ ಸಾವಿರಕ್ಕೂ ಹೆಚ್ಚು ಗಣ್ಯರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೇ, ಅವರು ದಂತ ವೈದ್ಯಕೀಯದಲ್ಲಿ ಇತ್ತೀಚೆಗೆ ಆದ ಹಲವಾರು ವಿಷಯಗಳ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಒಟ್ಟು 315 ವಿದ್ಯಾರ್ಥಿಗಳು, 11 ಸಿಬ್ಬಂದಿ ಹಾಗೂ 312 ಪೋಸ್ಟರ್‌ಗಳ ಕುರಿತು ವಿಷಯ ಮಂಡನೆಯಾಗಲಿವೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವೈಜ್ಞಾನಿಕ ವಿಷಯದ ಕುರಿತು ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಡಾ. ಬಲರಾಮ ನಾಯ್ಕ, ಡಾ. ಮಹಾಂತೇಶ ಎಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement