ಸಂಚಾರಿ ಪೀಠ ಕಾಯಂ: ವಿಜಯೋತ್ಸವ
ಧಾರವಾಡ: ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠವನ್ನು ಕೇಂದ್ರ ಸಚಿವ ಸಂಪುಟ ಕಾಯಂ ಪೀಠವಾಗಿಸಲು ತೀರ್ಮಾನಿಸಿದ್ದರಿಂದ ಬುಧವಾರ ಹೈಕೋರ್ಟ್ ಸಂಚಾರಿ ಪೀಠದ ವಕೀಲರ ಸಂಘ ವಿಜಯೋತ್ಸವ ಆಚರಿಸಿತು.
ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ಅವರಿಗೆ ವಕೀಲರ ಬಳಗ ಸಿಹಿ ತಿನಿಸಿ ಅವರ ನೇತೃತ್ವದ ಹೋರಾಟಕ್ಕಾಗಿಯೇ ಸಂಚಾರಿ ಪೀಠ, ಕಾಯಂ ಪೀಠ ಉತ್ತರ ಕರ್ನಾಟಕಕ್ಕೆ ಒಲಿದು ಬಂತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಸುರೇಶ ಹುಡೇದಗಟ್ಟಿ, ಪದಾಧಿಕಾರಿಗಳಾದ ಜಗದೀಶ ಪಾಟೀಲ, ಮದನ ಮೋಹನ್, ಹಜರತಅಲಿ ಗೊರವಿನಕೊಳ್ಳ, ಅರವಿಂದ ಕುಲಕರ್ಣಿ, ಸಂತೋಷ ಮಲ್ಲಿಗೌಡರ, ಮಹೇಶ ಶಿವಪೂಜಿ, ಶ್ರೀನಿವಾಸ, ಶರ್ಮಿಳಾ ಪಾಟೀಲ, ಶ್ರೀನಂದ ಪಾಶ್ವಪುರಿ ಇದ್ದರು.