ಸ್ಟಾಕ್ ಖಾಲಿಗೆ ಅವಕಾಶ ಕೊಡಿ
ಹುಬ್ಬಳ್ಳಿ: ರಾಜ್ಯ ಸರ್ಕಾರ ಹೊರಡಿಸಿರುವ ಗುಟ್ಕಾ ನಿಷೇಧದ ಆದೇಶ ಸ್ವಾಗತಿಸಿರುವ ನಗರದ ಉತ್ತರ ಕರ್ನಾಟಕ ಪಾನ ಮಸಾಲಾ ಮತ್ತು ಕನ್ಫೆಕ್ಷ್ಯನರಿ ವ್ಯಾಪಾರಸ್ಥರ ಸಂಘ, ಕಿರುಕುಳ ವ್ಯಾಪಾರಸ್ಥರ ಬಳಿ ಇರುವ ಗುಟ್ಕಾ ಸ್ಟಾಕ್ ಖಾಲಿ ಮಾಡಲು ಕಾಲವಕಾಶ ನೀಡುವಂತೆ ಆಗ್ರಹಿಸಿದೆ. ಇತ್ತೀಚೆಗೆ ಕಾಗಿನೆಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಗುಟ್ಕಾ ಸ್ಟಾಕ್ ಖಾಲಿ ಮಾಡಲು ಕನಿಷ್ಠ ಮೂರು ವಾರಗಳ ಕಾಲವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಗುಟ್ಕಾ ಸ್ಟಾಕ್ ಖಾಲಿ ಮಾಡದೇ ನಿಷೇಧಾಜ್ಞೆ ಜಾರಿಗೆ ತಂದಲ್ಲಿ ವ್ಯಾಪಾರಸ್ಥರಿಗೆ ಹೆಚ್ಚಿನ ನಷ್ಟ ಉಂಟಾಗುತ್ತದೆ ಎಂದು ತಿಳಿಸಿದ್ದಾರೆ. ಸಂಘದ ಅಧ್ಯಕ್ಷ ಲಲಿತ ಚೋಪ್ರಾ, ರವಿ ಎಲಿಗಾರ, ಚನ್ನವೀರ ಡಿಗ್ಗಿ, ಮಂಜುನಾಥ ಪಾವಟೆ ಮತ್ತಿತರರು ಹಾಜರಿದ್ದರು.