ಹುಬ್ಬಳ್ಳಿಯಲ್ಲಿ ರಭಸದ ಮಳೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 5
ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ರಭಸದ ಮಳೆ ಸುರಿಯಿತು. ಮಧ್ಯಾಹ್ನ ಸುಮಾರು 3.30ಕ್ಕೆ ಪ್ರಾರಂಭಗೊಂಡ ಮಳೆ, ಸಂಜೆ 5ರ ನಂತರವೂ ಜಿಟಿಜಿಟಿಯಾಗಿ ಸುರಿಯುತ್ತಿತ್ತು. ಬೆಳಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನ ಸುಮಾರು 3 ಗಂಟೆ ನಂತರ ಮೋಡಗಳಿಂದ ಕಪ್ಪಾಯಿತು.
ಸುಮಾರು 3.30ಕ್ಕೆ ಏಕಾಏಕಿ ಮಳೆ ರಭಸವಾಗಿ ಸುರಿಯತೊಡಗಿದ್ದರಿಂದ ಬೈಕ್ ಸವಾರರು ಮಳೆಯಲ್ಲಿ ನೆನೆಯುವುದು ಅನಿವಾರ್ಯವಾಯಿತು. ಪಾದಚಾರಿಗಳು ಸಮೀಪದ ಹೋಟೆಲ್, ಅಂಗಡಿ, ದೇವಸ್ಥಾನಗಳಲ್ಲಿ ಆಶ್ರಯ ಪಡೆದರು. ರಸ್ತೆ ಬದಿ ವ್ಯಾಪಾರ ನಡೆಸುತ್ತಿದ್ದ ಬೀದಿ ವ್ಯಾಪಾರಸ್ಥರು ತಮ್ಮ ಸರಕುಗಳನ್ನು ರಸ್ತೆ ಮೇಲೆಯೇ ಬಿಟ್ಟು, ಸಮೀಪದ ಅಂಗಡಿಗಳತ್ತ ದೌಡಾಯಿಸಿದರು.
ಮಕ್ಕಳು ಮಳೆಯಲ್ಲಿ ನೆನೆಯುತ್ತಲೇ ಓಡಾಡಿದರೆ, ಬೈಕ್ ಸವಾರರು ರಸ್ತೆ ಬದಿ ಬೈಕ್ ನಿಲ್ಲಿಸಿ ಸಮೀಪದ ಅಂಗಡಿ, ಹೋಟೆಲ್ಗಳತ್ತ ನಡೆದರು. ಸಂಜೆ 5.30-6ರ ಬಳಿಕ ಮಳೆ ಸಂಪೂರ್ಣವಾಗಿ ನಿಂತಿದ್ದರಿಂದ ವಿದ್ಯಾರ್ಥಿಗಳು, ನೌಕರರು ಯಾವುದೇ ಅಡಚಣೆ ಇಲ್ಲದೇ ಮನೆ ತಲುಪಿದರು.