ಕಂಪ್ಯೂಟರ್ ಆಪರೇಟರ್ಗಳಿಂದ ಮನವಿ
ನರಗುಂದ: ತಾಲೂಕಿನ 12 ಗ್ರಾಪಂ ಕಂಪ್ಯೂಟರ್ ಆಪರೇಟ್ರಗಳಿಗೆ ತಮ್ಮ ಗ್ರಾಪಂದಲ್ಲಿ ಮಾಡಬೇಕಾದ ಕಾರ್ಯ ಸಾಕಷ್ಟಿರುತ್ತದೆ. ಅದರ ಜತಗೆ ಪಡಿತರ ಚೀಟಿಗಳ ಕಾರ್ಯವನ್ನು ಅವರಿಗೆ ವಹಿಸಿದ್ದರಿಂದ ಗ್ರಾಪಂ ಕಾರ್ಯಗಳಿಗೆ ತೊಂದರೆಯಾಗುತ್ತಿದ್ದು ಅದಕ್ಕೆ ಈ ಕಾರ್ಯವನ್ನು ಬೇರೆಯವರಿಗೆ ನೀಡಬೇಕೆಂದು ಆಗ್ರಹಿಸಿ ಗ್ರಾಪಂ ಕಂಪ್ಯೂಟರ್ ಆಪರೇಟರ್ಗಳು ಬುಧವಾರ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಾವು ಈ ಹಿಂದೆ ಹೊಸ ಪಡಿತರ ಚೀಟಿ ಹಾಗೂ ತಾತ್ಕಾಲಿಕ ಪಡಿತರ ಚೀಟಿಯ ಪೋಟೊ ಮತ್ತು ಬೆರಳಚ್ಚು ತೆಗೆಯಲಾಗಿತ್ತು, ಆ ಸಮಯದಲ್ಲಿ ಕೆಲವು ಪಡಿತರ ಚೀಟಿಗಳಲ್ಲಿ ತಾಂತ್ರಿಕ ಕಾರಣಗಳಿಂದ ಹೆಸರು ಮತ್ತು ಕಾರ್ಡ್ಗಳ ಸಂಖ್ಯೆ ತಪ್ಪು ಬಂದಿದ್ದರಿಂದ ನೀವು ಈ ರೀತಿ ತಪ್ಪು ಮಾಡಿದ್ದೀರೆಂದು ನಮಗೆ ಗ್ರಾಪಂ ವ್ಯಾಪ್ತಿಯ ಕೆಲವು ಸಾರ್ವಜನಿಕರು ಕುಡಿದು ಬಂದು ಅಸಭ್ಯವಾಗಿ ನಮ್ಮ ಕುಟುಂಬವನ್ನು ನಿಂದಿಸಿದ್ದಾರೆ. ಅದೇ ರೀತಿ ಪ್ರತಿ ವರ್ಷ ಗ್ರಾಪಂಗೆ ಸರ್ಕಾರದ ಯೋಜನೆಗಳಾದ ಎಂ.ಜಿ.ಎನ್.ಆರ್.ಇ.ಜೆ.ವಿ. ರಾಜೀವ ಗಾಂಧಿ ವಸತಿ ಯೋಜನೆ ಸೇರಿದಂತೆ ಹಲವಾರು ಯೋಜನಗಳ ಕಾರ್ಯ ಮಾಡುವುದು ವಿಳಂಬವಾಗುವದರಿಂದ ಸರ್ಕಾರ ಕೂಡಲೇ ನಮ್ಮ ಕಾರ್ಯದ ಭಾರವನ್ನು ಕಡಿಮೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಕಂಪ್ಯೂಟರ್ ಆಪರೇಟರಗಳಾದ ರಮೇಶ ವಾಸನ, ಭರಮಪ್ಪ, ರುದ್ರಪ್ಪ ಐನಾಪುರ, ಶಿವು ಕಾಂಬಳೆ, ಮಲ್ಲು, ಕಾಶಪ್ಪ ಚಂಗಳಿ, ಮಹಾಲಕ್ಷ್ಮೀ ರಾಯನಗೌಡ್ರ, ವಿಜಯಲಕ್ಷ್ಮೀ ಹಿರೇಮಠ, ಭಾರತಿ ಜಾಧವ ಮುಂತಾದವರು ಹಾಜರಿದ್ದರು.
--