ತರಬೇತಿಗೆ ಆಸಕ್ತರಿಂದ ಅರ್ಜಿ ಆಹ್ವಾನ
ಧಾರವಾಡ: ಇಲ್ಲಿಯ ವಿದ್ಯಾಗಿರಿಯಲ್ಲಿರುವ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ (ಪಾಲಿಟೆಕ್ನ್ನಿಕ್)ಯಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗದಿಂದ ಪ್ರಾಯೋಜಿತ, ಪಾಲಿಟೆಕ್ನ್ನಿಕ್ ಮುಖಾಂತರ ಸಮುದಾಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಅಲ್ಪಾವಧಿ ಉಚಿತ ತರಬೇತಿಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಬ್ಯಾಗ್ ತಯಾರಿಕೆ ಮತ್ತು ಟೇಲರಿಂಗ್ (1 ತಿಂಗಳು), ರೇಫ್ರೀಜಿರೆಶನ್ ಮತ್ತು ಕೂಲರ್ಸ್ ರಿಪೇರಿ (1 ತಿಂಗಳು), ಕಟ್ಟಡ ಕಾಮಗಾರಿ ನಿರ್ವಾಹಣಾ ತಂತ್ರಜ್ಞಾನ (2 ತಿಂಗಳು), ಕಂಪ್ಯೂಟರ್ ಹಾರ್ಡವೇರ್ ಮತ್ತು ಅಸೆಂಬ್ಲಿಂಗ್ (1 ತಿಂಗಳು), ಕನ್ಟ್ರಕ್ಷನ್ ಟೆಕ್ನಾಲಜಿ ಟ್ರೇನಿಂಗ್ (2 ತಿಂಗಳು), ಬೇಸಿಕ್ ಕಂಪ್ಯೂಟರ್ (1 ತಿಂಗಳು), ಗಿಫ್ಟ್ ಮೇಕಿಂಗ್ (1 ತಿಂಗಳು), ಸೋಲಾರ್ ಎಕ್ಯೂಪ್‌ಮೆಂಟ್ ಮೆಕ್ಯಾನಿಕ್ (1 ತಿಂಗಳು), ಸ್ಟೇಪ್ಲೈಜರ್, ಇನ್‌ರ್ಟರ್, ಯುಪಿಎಸ್ ಮೇಕಿಂಗ್ ಮತ್ತು ರಿಪೇರಿ (1 ತಿಂಗಳು), ಅಟೋಕ್ಯಾಡ್ (2 ತಿಂಗಳು), ಬ್ಯೂಟಿಷಿಯನ್ ಮತ್ತು ಹೇರ್ ಡ್ರೆಸಿಂಗ್ (1ತಿಂಗಳು), ಮೊಬೈಲ್ ರಿಪೇರಿ ಮತ್ತು ಸರ್ವಿಸ್ (1 ತಿಂಗಳು), ಹೊಂ ಅಪ್ಲೇನ್ಸ ರಿಪೇರಿ (1 ತಿಂಗಳು), ಡ್ರಾಯಿಂಗ್ ಮತ್ತು ಪೇಟಿಂಗ್ (1 ತಿಂಗಳು), ಮ್ಯೂಜಿಕ್ ಇನ್ಸಟ್ರೂಮೆಂಟ್ಸ ಪ್ಲೇ (1 ತಿಂಗಳು) ಕುರಿತ ತರಬೇತ್ನಿ ನೀಡಲಾಗುವುದು. ಆಸಕ್ತರು ಜೂ. 25ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಪ್ರಾಚಾರ್ಯ ಕೆ. ಗೋವಿಂದ ಭಟ್ಟ ತಿಳಿಸಿದ್ದಾರೆ. ಮಾಹಿತಿ ಹಾಗೂ ಅರ್ಜಿಗೆ ವೈ.ಎಂ. ಡಕ್ಕಣ್ಣವರ, ಜೆಎಸ್‌ಎಸ್ ಕೆ.ಎಚ್. ಕಬ್ಬೂರ ತಾಂತ್ರಿಕ ಶಿಕ್ಷಣ ಸಂಸ್ಥೆ, ವಿದ್ಯಾಗಿರಿ, ಧಾರವಾಡ-04 (ಮೊಸಂ-8050561288 ಅಥವಾ ದೂಸಂ 0836-2468654 ) ಸಂಪರ್ಕಿಸಲು ಕೋರಲಾಗಿದೆ.
ಇಂದು ವಿಶೇಷ ಉಪನ್ಯಾಸ ಕಾರ್ಯಕ್ರಮ
ಧಾರವಾಡ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದಲ್ಲಿ ಜೂ. 13ರಂದು 'ಮ.ನಿ.ಪ್ರ. ಮಹಾಂತಪ್ಪಗಳು-ಮುರುಘಾಮಠ ದತ್ತಿ' ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 5.30ಕ್ಕೆ ಮುರುಘಾಮಠದಲ್ಲಿ ನಡೆಯಲಿರುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಮುರುಘಾಮಠದ ಪೀಠಾಧ್ಯಕ್ಷ ಮಲ್ಲಿಕಾರ್ಜುನ ಶ್ರೀ ವಹಿಸುವರು. ಶಾಸಕ ವಿನಯ ಕುಲಕರ್ಣಿ, ಬಸವಶಾಂತಿ ಮಿಷನ್ ಅಧ್ಯಕ್ಷ ಮಹಾದೇವ ಹೊರಟ್ಟಿ ಅತಿಥಿಗಳಾಗಿ ಪಾಲ್ಗೊಳ್ಳುವರು. ಕರ್ನಾಟಕ ವಿಶ್ವವಿದ್ಯಾಲಯ ಬಸವ ಅಧ್ಯಯನ ಪೀಠದ ಅಧ್ಯಕ್ಷ ಡಾ. ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸುವರು. 'ವಚನ ಸಾಹಿತ್ಯ: ಒಂದು ಚಿಂತನೆ' ಕುರಿತು ಸಾಹಿತಿ ರಂಜಾನ್ ದರ್ಗಾ ಉಪನ್ಯಾಸ ನೀಡುವರು.
ಪಾಲಕರ ಏಕಮುಖ ನಿಲುವು ಕೆಲವೇ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ: ಬಿಇಓ ಗಿರೀಶ ಪದಕಿ
ಧಾರವಾಡ: ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡಿಸುವಲ್ಲಿ ಪಾಲಕರು ತುಂಬ ಗೊಂದಲದಲ್ಲಿದ್ದಾರೆ. ಶಾಲೆ ಆಯ್ಕೆ ಮತ್ತು ಮಗುವಿನ ಕಲಿಕೆಯ ಭಾಷಾ ಮಾಧ್ಯಮ ಕುರಿತಂತೆ ಪಾಲಕರು ತಾಳುತ್ತಿರುವ ನಿಲುವುಗಳು ಏಕಮುಖಿಯಾಗಿದ್ದರಿಂದಾಗಿ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳು ಬೆಳೆಯುವಂತಾಗಿವೆ ಎಂದು ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಹೇಳಿದರು.
ಚಿಲಿಪಿಲಿ ಸಂಸ್ಥೆಯು ಮಾಳಾಪುರದಲ್ಲಿ ನೂತನವಾಗಿ ಪ್ರಾರಂಭಿಸಿದ 'ಗುಬ್ಬಚ್ಚಿ ಗೂಡು ಪ್ರಾಥಮಿಕ ಶಾಲೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇದರಿಂದ ಈ ಸ್ಪರ್ಧೆಗೆ ಒಡ್ಡಿಕೊಳ್ಳಲಾಗದೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿರುವುದರಿಂದ ಖಾಸಗಿ ಶಾಲೆಗಳು ಹೆಚ್ಚು ಹೆಚ್ಚು ತಲೆ ಎತ್ತುವಂತಾಗಿವೆ. ಆದರೆ ಕಲಿಕೆಯ ಗುಣಮಟ್ಟ ಮಾತ್ರ ಸರ್ಕಾರಿ ಶಾಲೆಗಳಿಗಿಂತ ಕೆಳಮಟ್ಟದಲ್ಲಿರುವುದನ್ನು ಪಾಲಕರು ಗಮನಹರಿಸದೇ ಹೋಗುತ್ತಿರುವುದು ವಿಷಾದಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿಥಿಯಾಗಿದ್ದ ಹಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ ಮಾತನಾಡಿ, ಮಕ್ಕಳಿಗೆ ಅಕ್ಷರ ಕಲಿಸುವ ಭರಾಟೆಯಲ್ಲಿ ಅವರ ಬಾಲ್ಯ ಕಮರಿಸುವಂತೆ ಮಾಡುತ್ತಿದ್ದಾರೆ. ಇದು ಅಪಾಯಕಾರಕ ಲಕ್ಷಣ. ಮಕ್ಕಳು ಬಾಲ್ಯವನ್ನು ಆನಂದದಾಯಕವಾಗಿ ಕಳಿದಾಗ ಮಾತ್ರ ಆ ಮಕ್ಕಳ ಮುಂದಿನ ದಿನಗಳು ಸುಂದರವಾಗಿರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶ್ರೀಶೈಲ ಹುದ್ದಾರ ಮಾತನಾಡಿ ದರು. ಶಂಕರ ಪಳೋಟಿ, ಗುರು ತಿಗಡಿ, ಅಕ್ಕಿ, ಚನ್ನಬಸಪ್ಪ ಹೊಟ್ಟಿ, ಶಂಕರ ಹಲಗತ್ತಿ, ಗಿರಜಾ ಹೊಟ್ಟಿ, ವಿಜಯಲಕ್ಷ್ಮಿ ಸುಭಾಂಜಿ, ವಿದ್ಯಾ ವಗ್ಗನಗೇರಿ ಇದ್ದರು.