ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪಾಲಕರ ಏಕಮುಖ ನಿಲುವು ಕೆಲವೇ ಶಿಕ್ಷಣ ಸಂಸ್ಥೆಗಳ ಬೆಳವಣಿಗೆ: ಬಿಇಓ ಗಿರೀಶ ಪದಕಿ

Lingaraj Badiger
Updated On : 13 Jun 2013, 11:30 am

ಧಾರವಾಡ: ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೊಡಿಸುವಲ್ಲಿ ಪಾಲಕರು ತುಂಬ ಗೊಂದಲದಲ್ಲಿದ್ದಾರೆ. ಶಾಲೆ ಆಯ್ಕೆ ಮತ್ತು ಮಗುವಿನ ಕಲಿಕೆಯ ಭಾಷಾ ಮಾಧ್ಯಮ ಕುರಿತಂತೆ ಪಾಲಕರು ತಾಳುತ್ತಿರುವ ನಿಲುವುಗಳು ಏಕಮುಖಿಯಾಗಿದ್ದರಿಂದಾಗಿ ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳು ಬೆಳೆಯುವಂತಾಗಿವೆ ಎಂದು ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಹೇಳಿದರು.
ಚಿಲಿಪಿಲಿ ಸಂಸ್ಥೆಯು ಮಾಳಾಪುರದಲ್ಲಿ ನೂತನವಾಗಿ ಪ್ರಾರಂಭಿಸಿದ 'ಗುಬ್ಬಚ್ಚಿ ಗೂಡು ಪ್ರಾಥಮಿಕ ಶಾಲೆ'ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಇದರಿಂದ ಈ ಸ್ಪರ್ಧೆಗೆ ಒಡ್ಡಿಕೊಳ್ಳಲಾಗದೇ ಸರ್ಕಾರಿ ಶಾಲೆಗಳು ಸೊರಗುತ್ತಿವೆ. ಪಾಲಕರಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗಿರುವುದರಿಂದ ಖಾಸಗಿ ಶಾಲೆಗಳು ಹೆಚ್ಚು ಹೆಚ್ಚು ತಲೆ ಎತ್ತುವಂತಾಗಿವೆ. ಆದರೆ ಕಲಿಕೆಯ ಗುಣಮಟ್ಟ ಮಾತ್ರ ಸರ್ಕಾರಿ ಶಾಲೆಗಳಿಗಿಂತ ಕೆಳಮಟ್ಟದಲ್ಲಿರುವುದನ್ನು ಪಾಲಕರು ಗಮನಹರಿಸದೇ ಹೋಗುತ್ತಿರುವುದು ವಿಷಾದಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿಥಿಯಾಗಿದ್ದ ಹಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ ಮಾತನಾಡಿ, ಮಕ್ಕಳಿಗೆ ಅಕ್ಷರ ಕಲಿಸುವ ಭರಾಟೆಯಲ್ಲಿ ಅವರ ಬಾಲ್ಯ ಕಮರಿಸುವಂತೆ ಮಾಡುತ್ತಿದ್ದಾರೆ. ಇದು ಅಪಾಯಕಾರಕ ಲಕ್ಷಣ. ಮಕ್ಕಳು ಬಾಲ್ಯವನ್ನು ಆನಂದದಾಯಕವಾಗಿ ಕಳಿದಾಗ ಮಾತ್ರ ಆ ಮಕ್ಕಳ ಮುಂದಿನ ದಿನಗಳು ಸುಂದರವಾಗಿರುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಶ್ರೀಶೈಲ ಹುದ್ದಾರ ಮಾತನಾಡಿ ದರು. ಶಂಕರ ಪಳೋಟಿ, ಗುರು ತಿಗಡಿ, ಅಕ್ಕಿ, ಚನ್ನಬಸಪ್ಪ ಹೊಟ್ಟಿ, ಶಂಕರ ಹಲಗತ್ತಿ, ಗಿರಜಾ ಹೊಟ್ಟಿ, ವಿಜಯಲಕ್ಷ್ಮಿ ಸುಭಾಂಜಿ, ವಿದ್ಯಾ ವಗ್ಗನಗೇರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement