ವಾಂತಿಭೇದಿ: 30ಕ್ಕೂ ಹೆಚ್ಚು ಜನ ಅಸ್ವಸ್ಥ
ಕ.ಪ್ರ. ವಾರ್ತೆ ಧಾರವಾಡ ಜೂ. 12
ಕಲುಷಿತ ನೀರು ಸೇವನೆಯಿಂದ ಜಿಲ್ಲೆಯ ವಿವಿಧ ಗ್ರಾಮಗಳಿಂದ ವಾಂತಿಭೇದಿಗೆ ತುತ್ತಾಗಿರುವ 30ಕ್ಕೂ ಹೆಚ್ಚು ಜನರು ಚಿಕಿತ್ಸೆಗಾಗಿ ಇಲ್ಲಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ 15 ಜನರು ವಾಂತಿಭೇದಿಗೆ ತುತ್ತಾಗಿ ದಾಖಲಾಗಿದ್ದು ಕೆಲವರು ಗುಣಮುಖರಾಗಿ ಮನೆಗೆ ತೆರಳಿದ್ದರೆ, ಇನ್ನ್ನು ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವಾರದಿಂದ ವಾಂತಿಭೇದಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪ್ರಕರಣಗಳ ಸಂಖ್ಯೆಗಳ ಹೆಚ್ಚಳ ಕಂಡು ಬಂದಿದೆ. ತಾಲೂಕಿನ ಗರಗ, ಚಂದನಮಟ್ಟಿ, ಜೋಡಳ್ಳಿ, ಜೋಗುರ, ಶಿರೂರ, ಮರೇವಾಡ, ಮನಗುಂಡಿ ಗ್ರಾಮದಿಂದ ವಾಂತಿಭೇದಿಗೆ ತುತ್ತಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.