ಸೆಪ್ಟೆಂಬರ್ ಒಳಗೆ ಸಹಕಾರ ಸಂಘಗಳ ಚುನಾವಣೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 12
ತಿದ್ದುಪಡಿಯಾದ ಕಾಯ್ದೆಯನ್ವಯ ಇದೇ ಸೆಪ್ಟೆಂಬರ್‌ದೊಳಗಾಗಿ ರಾಜ್ಯದಲ್ಲಿನ ಎಲ್ಲ ಸಹಕಾರ ಸಂಘಗಳ ಚುನಾವಣೆ ಪೂರ್ಣಗೊಳಿಸಲು ಸಹಕಾರ ಸಂಘಗಳ ಚುನಾವಣಾ ಆಯೋಗ ನಿರ್ಧರಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಹಕಾರ ಸಂಘಗಳ ಚುನಾವಣಾ ಆಯೋಗದ ಆಯುಕ್ತ ಎನ್.ಸಿ. ಮುನಿಯಪ್ಪ, ರಾಜ್ಯದಲ್ಲಿನ ಸಹಕಾರ ಸಂಘಗಳ ಚುನಾವಣ್ನೆ ನಡೆಸಲು ಸರ್ಕಾರ ಇದೇ ಮೊದಲ ಬಾರಿಗೆ ಪ್ರತ್ಯೇಕ ಆಯೋಗ ರಚಿಸಿದೆ ಎಂದು ಹೇಳಿದರು.
ಸ್ವಾಯತ್ತ ಸಂಸ್ಥೆಯಾಗಿರುವ ಆಯೋಗ ಸರ್ಕಾರ ನೂತನವಾಗಿ ಅನುಷ್ಠಾನಗೊಳಿಸಲಾದ ಕಾಯ್ದೆಯನ್ವಯ ಚುನಾವಣೆಗಳನ್ನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲಾಗುವುದು ಎಂದರು.
ಆಯೋಗವು ಐದು ವರ್ಷದ ಸಹಕಾರಿ ವರ್ಷ ಪೂರೈಸಿದ ಸಂಘಗಳ ಮತದಾರರ ಪಟ್ಟಿ ತಯಾರಿಸುವುದು, ಜಿಲ್ಲಾ ಹಾಗೂ ಕೆಳ ಹಂತದ ಚುನಾವಣಾಧಿಕಾರಿಗಳನ್ನ್ನು ನೇಮಿಸಿ ಚುನಾವಣೆ ನಡೆಸಲಿದೆ. ತಾಂತ್ರಿಕ ಕಾರಣಗಳಿಂದ ಚುನಾವಣೆ ನಡೆಸಲು ಸಾಧ್ಯವಾಗದಿದ್ದಲ್ಲಿ ಅಂತಹ ಸಂಘಗಳಿಗೆ ಆಡಳಿತಾಧಿಕಾರಿಗಳನ್ನ್ನು ಸಹ ಆಯೋಗ ನೇಮಿಸಲಿದೆ.
ರಾಜ್ಯದಲ್ಲಿ ಒಟ್ಟು 36 ಸಾವಿರ ಸಹಕಾರ ಸಂಘಗಳಿದ್ದು, ಇವುಗಳಲ್ಲಿ 4 ಸಾವಿರ ಸಂಘಗಳು ಸಮಾಪನಗೊಂಡಿವೆ. ಉಳಿದ ಸಂಘಗಳಿಗೆ ಅತ್ಯಂತ ಪಾರದರ್ಶಕ ಚುನಾವಣೆ ನಡೆಸಲಾಗುವುದು. ಕಳೆದ ಮಾರ್ಚ್‌ನಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಳಿ ಅವಧಿ ಪೂರ್ಣಗೊಂಡಿದೆ. ಸರ್ಕಾರ ಆರು ತಿಂಗಳ ಅವಧಿ ವಿಸ್ತರಿಸಿದ ಕಾರಣ ಇದೀಗ ಚುನಾವಣೆಗೆ ಆಯೋಗ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮುನಿಯಪ್ಪ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 120, ಹಾವೇರಿಯಲ್ಲಿ 70 ಮತ್ತು ಗದಗ ಜಿಲ್ಲೆಯಲ್ಲಿ 108 ಸಹಕಾರ ಸಂಘಗಳಿಗೆ ಚುನಾವಣೆ ನಡೆಯಬೇಕಿದ್ದು, ಇದಕ್ಕೆ ಸಂಬಂಧಿಸಿದಂತೆ ಬುಧವಾರ (ಜೂ.12) ಮೂರೂ ಜಿಲ್ಲೆಗಳ ಸಹಕಾರ ಸಂಘ, ಬ್ಯಾಂಕ್ ಹಾಗೂ ಸೌಹಾರ್ದ ಸಹಕಾರಿಗಳ ಪದಾಧಿಕಾರಿಗಳ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ನಡೆಸಿ ಸೂಕ್ತ ಮಾಹಿತಿ, ಸಲಹೆ ನೀಡಲಾಯಿತು ಎಂದರು.
ಸರ್ಕಾರ ಇದೀಗ ಅನುಷ್ಠಾನಗೊಳಿಸುತ್ತಿರುವ ನೂತನ ಕಾಯ್ದೆಯು ಕರಡು ಹಂತದಲ್ಲಿದ್ದು, ಇನ್ನ್ನೊಂದು ವಾರದಲ್ಲಿಯೇ ಅಂತಿಮಗೊಳ್ಳಲಿದೆ. ನಂತರ ಸರ್ಕಾರ ಅಧಿಸೂಚನೆ ಹೊರಡಿಸಿದ ತಕ್ಷಣ ಆಯೋಗ ಚುನಾವಣಾ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಲಿದೆ. ಅರ್ಹ ಮತದಾರರ ಪಟ್ಟಿ ಸಿದ್ಧಪಡಿಸುವ ಹೊಣೆಯನ್ನು ಆಯಾ ಸಂಘಗಳ ಕಾರ್ಯದರ್ಶಿ ಅಥವಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ವಹಿಸಲಾಗಿದೆ. ಚುನಾವಣೆ ಆಗಬೇಕಿರುವ ಎಲ್ಲ ಸಹಕಾರ ಸಂಘಗಳು ನೂತನ ಕಾಯ್ದೆಯಂತೆ ಬೈಲಾ ತಿದ್ದುಪಡಿ ಮಾಡುವಂತೆ ಆಯೋಗ ಈಗಾಗಲೇ ಸೂಚನೆ ನೀಡಿದೆ.
ಆಯೋಗಕ್ಕೆ ಪ್ರತ್ಯೇಕ ಸಿಬ್ಬಂದಿ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಮಟ್ಟದಿಂದ ಕೆಳ ಹಂತದ ಚುನಾವಣಾ ಕಾರ್ಯಗಳಿಗೆ ಸಹಕಾರ ಇಲಾಖೆ ಮಾತ್ರವಲ್ಲದೇ ಕಂದಾಯ, ಕೃಷಿ ಸೇರಿದಂತೆ ಮತ್ತಿತರ ಇಲಾಖೆಗಳ ಸಿಬ್ಬಂದ್ನಿ ಬಳಸಿಕೊಳ್ಳಲು ಆಯೋಗ ತೀರ್ಮಾನಿಸಿದೆ. ನೂತನ ಕಾಯ್ದೆಯಲ್ಲಿ ಪರಿಷ್ಕರಿಸಿದ ಮೀಸಲಾತಿ ಅಳವಡಿಸಿ ಚುನಾವಣೆ ನಡೆಸಲಾಗುವುದು. ಈ ಕುರಿತಂತೆ ಸಹಕಾರಿ ವಲಯದಿಂದ ಬರುವ ಅಹವಾಲು ಮತ್ತು ಸಲಹೆಗಳನ್ನೂ ಆಯೋಗ ಸ್ವೀಕರಿಸುತ್ತಿದೆ ಎಂದು ತಿಳಿಸಿದರು.
ಸಹಕಾರ ಇಲಾಖೆ ಜಂಟಿ ನಿಬಂಧಕ ಎಂ.ಡಿ. ಮಠಪತಿ, ಕೆಸಿಸಿ ಬ್ಯಾಂಕ್‌ನ ಅಧ್ಯಕ್ಷ ಬಸವರಾಜ ಸಿಂಧೂರ, ಆಯೋಗದ ಕಾರ್ಯದರ್ಶಿ ಬಿ.ಎಚ್. ಮಂಜಪ್ಪ, ಶಿವ ಕುಲಕರ್ಣಿ, ವೀರಣ್ಣ ಯಳಲ್ಲಿ ಉಪಸ್ಥಿತರಿದ್ದರು.