ಉತ್ತಮ ಫಲಿತಾಂಶ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ನಡೆಸಿದ ಏಪ್ರಿಲ್/ಮೇ 2013ರ ಅಂತಿಮ ಪದವಿ ಪರೀಕ್ಷಾ ಫಲಿತಾಂಶದಲ್ಲಿ ಜೆಎಸ್ಸೆಸ್ ಬನಶಂಕರಿ ಕಲಾ, ವಾಣಿಜ್ಯ ಮತ್ತು ಎಸ್.ಕೆ. ಗುಬ್ಬಿ ವಿಜ್ಞಾನ ಕಾಲೇಜಿನ ಬಿಕಾಂ ಪಧವಿ ಫಲಿತಾಂಶ ಶೇ. 97.45 ರಷ್ಟಾಗಿದ್ದು ಹಾಗೂ ಬಿಎಸ್ಸಿ ಪದವಿಯಲ್ಲಿ ಶೇ. 94.14ರಷ್ಟಾಗಿದೆ. ಬಿಕಾಂ ಪದವಿಯಲ್ಲಿ ಪೂಜಾ ದೊಡ್ಡಮನಿ (ಶೇ. 91.94) ಪ್ರಥಮ, ಗಣಪತಿ ಹೆಗಡೆ (ಶೇ.90.97) ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಿಎಸ್ಸಿ ಪದವಿಯಲ್ಲಿ ಶಿಲ್ಪಾ ಕಂಬಳಿ (ಶೇ.9 3.94) ಪ್ರಥಮ ಸ್ಥಾನ, ಅಶ್ವಿನಿ ಹಿರೇಮಠ (ಶೇ.93.90) ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ಡಾ.ಎಸ್.ಎನ್. ಹೆಗಡೆ, ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ, ವಿತ್ತಾಧಿಕಾರಿಗಳಾದ ಡಾ. ಅಜಿತಪ್ರಸಾದ ಅಭಿನಂದನೆ ಸಲ್ಲಿಸಿದ್ದಾರೆ.
ನಾಳೆ ಆರೋಗ್ಯ ತಪಾಸಣೆ
ಧಾರವಾಡ: ಕರ್ನಾಟಕ ರಕ್ಷಣಾ ಸೇನೆಯು ಜೂ. 16ರ ಬೆಳಗ್ಗೆ 10.30ರಿಂದ ಮಧ್ಯಾಹ್ನ 2.30ರ ವರೆಗೆ ಇಲ್ಲಿನ ಎನ್ಟಿಟಿಎಫ್ ಹತ್ತಿರದ ಬಾಸೆಲ್ ಮಿಶನ್ ಕಾಂಪೌಂಡ್ ಹತ್ತಿರದ ಉದ್ಯಾನವನದ ಎದುರುಗಡೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಂಡಿದೆ. ಆಸಕ್ತರು ಮೊ. 9449177771 ಸಂಪರ್ಕಿಸಬಹುದು ಎಂದು ಸಂತೋಷ ಬೋವೆರ ತಿಳಿಸಿದ್ದಾರೆ.
ನಾಳೆ ಸಂಗೀತ ಕಚೇರಿ
ಧಾರವಾಡ: ಅವನಿ ರಸಿಕರ ರಂಗ ವೇದಿಕೆ ಜೂ. 16ರ ಸಂಜೆ 5.30ಕ್ಕೆ ನಾರಾಯಣಪುರದಲ್ಲಿರುವ ವನಿ ಸಭಾಗೃಹದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿ ಹಮ್ಮಿಕೊಳ್ಳಲಾಗಿದೆ. ವಿದುಷಿ ರೇಣುಕಾ ನಾಕೋಡ ಸಂಗೀತ ಕಚೇರಿ ನಡೆಸಿ ಕೊಡುತ್ತಾರೆ. ಪಂ. ರಘುನಾಥ ನಾಕೋಡ ತಬಲಾದಲ್ಲಿ ಸಾಥ್ ನೀಡಲಿದ್ದಾರೆ ಎಂದು ಬ್ರಿಗೇಡಿಯರ್ ಎಸ್.ಜಿ. ಭಾಗವತ್ ತಿಳಿಸಿದ್ದಾರೆ.
ಓಡದ ವಾಹನ: ಪರದಾಟ
ಕಲಘಟಗಿ: ಸಂಗಮೇಶ್ವರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸೇವೆ ವಾಹನ ಇದ್ದೂ ಇಲ್ಲದಂತಾಗಿದ್ದು, ರೋಗಿಗಳು ಪರದಾಡುತ್ತಿದ್ದಾರೆ ಎಂದು ತಾಪಂ ಸದಸ್ಯ ಯಲ್ಲಾರಿ ಶಿಂಧೆ ದೂರಿದ್ದಾರೆ. ಈ ಕುರಿತು ತಾಲೂಕು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಿದರೆ, ಚಾಲಕರ ಕೊರತೆಯೇ ಕಾರಣ ಎಂದು ಉತ್ತರಿಸುತ್ತಾರೆ. ಸಾರಿಗೆ ಸಂಪರ್ಕ ಸೇವೆ ಸರಿಯಾಗಿಲ್ಲದ್ದರಿಂದ ಸುತ್ತಲಿನ ಗ್ರಾಮಗಳ ಜನರಿಗೆ ಕೂಡಲೇ ಆರೋಗ್ಯ ಸೇವೆ ವಾಹನ ನೀಡಲು ಆಗ್ರಹಿಸಿದ್ದಾರೆ.
ಲಾರಿ, ಬೈಕ್ ಡಿಕ್ಕಿ: ಸಾವು
ಕಲಘಟಗಿ: ಪಟ್ಟಣದ ಎಪಿಎಂಸಿ ಬಳಿಯ ಹೆದ್ದಾರಿಯಲ್ಲಿ ಲಾರಿ, ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದ ತೋಟಪ್ಪ ಬಿ. ಸೊರಟೂರ (48) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶುಕ್ರವಾರ ಮಧ್ಯಾಹ್ನ ಹುಬ್ಬಳ್ಳಿಯಿಂದ ಬರುತ್ತಿದ್ದ ಲಾರಿಗೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.