ಸ್ವಾಭಿಮಾನ ಬದುಕಿಗೆ ಶಿಕ್ಷಣ ಅವಶ್ಯ
ಧಾರವಾಡ: ಮಹಿಳೆಯರ ಸ್ವಾವಲಂಬನೆಯ ಸಾಧನೆಗೆ ಪುರುಷರ ಪಕ್ಷಪಾತ ಧೋರಣೆ ಅಡ್ಡಿಯಾಗಿದೆ ಎಂದು ಭಾರತ ಜ್ಞಾನ-ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ವೀರಣ್ಣ ಒಡ್ಡೀನ ಅಭಿಪ್ರಾಯಿಸಿದರು.
ತಾಲೂಕಿನ ಸೋಮಾಪುರ ಸಮುದಾಯ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರಿಗೆ ಪುರುಷರು ಅಗತ್ಯ ಶಿಕ್ಷಣ ನೀಡಿದರೆ ಅನ್ಯಾಯ, ಅಸಮಾನತೆ, ಶೋಷಣೆ, ಪರಾವಲಂಬನೆಗಳಿಂದ ಮುಕ್ತಳಾಗಿ ಅವಳು ಸ್ವಾಭಿಮಾನದ ಬದುಕು ಸಾಧಿಸಬಹುದು ಎಂದರು.
ಕಾರ್ಯಕ್ರಮದ ಮೇಲ್ವಿಚಾರಕ ಸಂತೋಷಕುಮಾರ ಮಾತನಾಡಿ, ಮಹಿಳೆಯರು ಉತ್ತಮ ಶಿಕ್ಷಣ ಪಡೆದುಕೊಂಡು ಕಲಿಕಾ ಸಮಾಜ ನಿರ್ಮಾಣ ಮಾಡಬೇಕೆಂದು ತಿಳಿಸಿದರು. ಕರೆಮ್ಮ ಮುತ್ತಗಿ ಅಧ್ಯಕ್ಷತೆ ವಹಿಸಿದ್ದರು. ಶಂಕ್ರಯ್ಯ, ಸರೋಜಾ, ಶಿವಮ್ಮ ಬೇಗೂರ, ಲಕ್ಷ್ಮೀ ಪಾಟೀಲ, ಕುಸುಮಾ ಪಾಟೀಲ, ಮಧು ಡೊಳ್ಳಿನ ಇದ್ದರು. ನಿರ್ಮಲಾ ಬೇಲೂರ ಸ್ವಾಗತಿಸಿದರು. ಪ್ರಭಾವತಿ ಪಾಟೀಲ ನಿರೂಪಿಸಿದರು. ಸುಧಾ ಶಿರಗುಪ್ಪಿ ಪರಿಚಯಿಸಿದರು. ವಿಜಯಾ ಅಂಗಡಿ ವಂದಿಸಿದರು.