ಜನಜಾಗೃತಿ ರ್ಯಾಲಿ
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ- ನಿಯಂತ್ರಣ ಘಟಕ, ಜಿಲ್ಲಾ ವಾರ್ತಾ ಇಲಾಖೆ, ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ, ಐಎಂಎ ರಕ್ತಭಂಡಾರ, ಎನ್ಸಿಸಿ, ಎನ್ನೆಸ್ಸೆಸ್, ಮದರ್ ಥೆರೆಸಾ, ಮಹೇಶ್ವರಿ ನರ್ಸಿಂಗ್ ಸ್ಕೂಲ್ ಮುಂತಾದ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ಗದಗ ಜಿಲ್ಲಾ ಮಟ್ಟದ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಜನಜಾಗೃತಿ ರ್ಯಾಲಿಗೆ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಚಾಲನೆ ನೀಡಿದರು.
ಮಹ್ಮದರಫೀಕ ನಿಧನ
ಗದಗ: ನಗರದ ಗ್ರೇನ್ ಮಾರ್ಕೆಟಿನ ಹಣ್ಣಿನ ದಲಾಲಿ ಅಂಗಡಿಯ ಮಾಲೀಕ ಮಹ್ಮದರಫೀಕ ಕಾಟಾಪುರ ಶುಕ್ರವಾರ ನಿಧನರಾದರು. ಮೃತರಿಗೆ ತಾಯಿ, ಪತ್ನಿ, ಪುತ್ರ ಇದ್ದಾರೆ. ಮಹ್ಮದರಫೀಕ ನಿಧನಕ್ಕೆ ಸಚಿವ ಎಚ್.ಕೆ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಕರೀಂಸಾಬ ಕರೂರು, ಬರಕತ್ಅಲಿ ಮುಲ್ಲಾ, ಶಫಿ ಕುದರಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.