ಮಾರುತಿ ಸುಜುಕಿ ಕಾರ್ ಎಕ್ಸ್ಚೇಂಜ್ ಮೇಳ
ಹುಬ್ಬಳ್ಳಿ: ಹುಬ್ಬಳ್ಳಿಯ ಮಾರುತಿ ಸುಜಕಿ ಡೀಲರ್ ಆರ್ಎನ್ಎಸ್ ಮೋಟರ್ಸ್ ಹಾಗೂ ರೇವಣಕರ ಮೋಟರ್ಸ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾರುತಿ ಸುಜುಕಿ ಮಹಾ ಎಕ್ಸ್ಚೇಂಜ್ ಮೇಳವನ್ನು ಶನಿವಾರ ಖ್ಯಾತ ಉದ್ಯಮಿ ಮದನ ದೇಸಾಯಿ ಉದ್ಘಾಟಿಸಿದರು. ಎಕ್ಸ್ಚೇಂಜ್ ಮೇಳದಲ್ಲಿ ಗ್ರಾಹಕರು ತಮ್ಮ ಹಳೇ ಕಾರನ್ನು ಹೊಸ ಮಾದರಿಯ ಮಾರುತಿ ಸುಜುಕಿ ಕಾರಿಗೆ ಬದಲಾಯಿಸಬಹುದು ಮತ್ತು ರು. 25 ಸಾವಿರ ಎಕ್ಸ್ಚೇಂಜ್ ಬೋನಸ್ ಪಡೆಯಬಹುದು. ವಿಶೇಷ ಹಣಕಾಸು ಯೊಜನೆ, ಉಚಿತ ಸರ್ವಿಸ್ ಹಾಗೂ ಎ.ಸಿ. ಚೆಕಪ್ ಸೌಲಭ್ಯವಿದೆ. ಸ್ಥಳದಲ್ಲೇ ನೋಂದಣಿ ಮಾಡಿಸಿದರೆ ಆಕರ್ಷಕ ಉಡುಗೊರೆ ನೀಡಲಾಗುತ್ತದೆ ಎಂದು ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಮಂಜುನಾಥ ಮರಡ್ಡಿ ತಿಳಿಸಿದ್ದಾರೆ.
ಮಾರುತಿ ಮಹಾ ಎಕ್ಸಚೆಂಜ್ ಮೇಳವನ್ನು ವಿದ್ಯಾನಗರದ ರಾಯಕರ್ ಮೈದಾನದಲ್ಲಿ ಆಯೋಜಿಸಲಾಗಿದ್ದು, ಜೂ. 16ರಂದು ನಡೆಯಲಿದೆ. ಮಹಾ ಎಕ್ಸಚೆಂಜ್ ಉದ್ಘಾಟನೆ ಸಂದರ್ಭದಲ್ಲಿ ಮಾರುತಿ ಸುಜುಕಿಯ ಏರಿಯಾ ಮ್ಯಾನೇಜರ ಅರುಣ ಪ್ರಸಾದ, ಟಿ.ಎಸ್.ಎಂ. ಮಂಜುನಾಥ ಮರಡ್ಡಿ, ರೇವಣಕರ ಮೋಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ಹರೀಶ ರೇವಣಕರ, ಆರ್.ಎನ್.ಎಸ್. ಮೋಟರ್ಸನ ಮಹಾಪ್ರಬಂಧಕಿ ಅರ್ಚನಾ ಶೆಟ್ಟಿ ಹಾಗೂ ಮತ್ತಿತರರು ಇದ್ದರು.