ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹೃದಯ ಭಾಷೆಯಾಗಿ ಕಾವ್ಯ: ವಿದ್ಯಾ ಕುಂದರಗಿ

Vishwanath S
Updated On : 16 Jun 2013, 11:00 am

ಧಾರವಾಡ: ಮನುಷ್ಯನ ಬದುಕಿನ ಸ್ತರಗಳಲ್ಲಿರಬಹುದಾದ ಪ್ರೀತಿ, ಸ್ನೇಹ, ಸಿಹಿ-ಕಹಿ ನೆನಪುಗಳು, ವಿಭಿನ್ನ ತಲ್ಲಣಗಳು, ವಾಸ್ತವ ಜಗತ್ತಿನ ವಿದ್ಯಮಾನಗಳು ಕಾವ್ಯದ ವಸ್ತುವಾಗಿ ಅಭಿವ್ಯಕ್ತಗೊಳ್ಳುತ್ತವೆ. ಕಾವ್ಯ ಹೃದಯ ಭಾಷೆಯಾಗಿ ಹೊರಹೊಮ್ಮುತ್ತದೆ ಎಂದು ಕವಯಿತ್ರಿ ವಿದ್ಯಾ ಕುಂದರಗಿ ಹೇಳಿದರು.
ಶನಿವಾರ ಧಾರವಾಡ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕ್ಷರ ಸಂಸ್ಕೃತಿ ರೂಪಿಸುವ ಮೂಲಕ ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸುವಲ್ಲಿ ಸೃಷ್ಟಿಯಾದ ಕಾವ್ಯ, ಮನುಷ್ಯರ ಸಂಬಂಧ ಹಳೆಯದು. ಶ್ರೇಣೀಕೃತ ಸಮಾಜ ವ್ಯವಸ್ಥೆ, ಲಿಂಗ ತಾರತಮ್ಯ, ಭಯೋತ್ಪಾದನೆ, ಭ್ರಷ್ಟಾಚಾರ, ರಾಜಕಾರಣ ಮುಂತಾದ ಮುಖಗಳ ಸುತ್ತ ಕಾವ್ಯ ಪ್ರಪಂಚ ತೆರೆದುಕೊಳ್ಳುತ್ತದೆ. ಕಾವ್ಯಕ್ಕೆ ತನ್ನದೇ ಆದ ಚೌಕಟ್ಟು, ಗೇಯತೆ, ಭಾವತನ್ಮಯತೆ, ಕಾವ್ಯದ ಲಕ್ಷಣಗಳು ಇರದಿದ್ದರೆ ತನ್ನ ವ್ಯಾಪ್ತಿ, ಮಹತ್ವ ಕಳೆದುಕೊಳ್ಳುತ್ತದೆ. ಮನುಷ್ಯನ ಬದುಕಿನಲ್ಲಿ ಮನುಷ್ಯತ್ವವನ್ನು ತುಂಬುವ ಕೆಲಸ ಕನ್ನಡ ಕಾವ್ಯ ಮಾಡುತ್ತದೆ ಎಂದರು.
ಸಾಹಿತಿ ಬಸವರಾಜ ಸೂಳಿಭಾವಿ ಆಶಯ ನುಡಿ ಹೇಳಿದರು. ಸಿದ್ದು ಸತ್ಯಣ್ಣವರ, ಸುಶಿಲೇಂದ್ರ ಕುಂದರಗಿ, ಸುಜಾತಾ ಹಡಗಲಿ, ಮಹಾಂತೇಶ ನರೇಗಲ್, ಆರ್.ಆರ್. ಹಲವಾಯಿ, ಲಕ್ಷ್ಮಿಕಾಂತ ಇಟ್ನಾಳ, ಕಾವ್ಯಶ್ರೀ ನಾಯಕ, ಪ್ರಮೋದ ಜೋಶಿ, ವೀರೇಶ ಜಾಲಿಕಟ್ಟಿ, ಶಬಾನಾ ಲಕ್ಕುಂಡಿ, ಬಿ. ಕೆ. ಹೊಂಗಲ ಕವಿತೆ ವಾಚಿಸಿದರು. ಕಸಾಪ ತಾಲೂಕಾಧ್ಯಕ್ಷ ಗುರು ತಿಗಡಿ, ಎಫ್.ಎಚ್. ಸಮುದ್ರಿ, ಶೈಲಾ ಕುಂಬಾರ, ಶಿವಾನಂದ ಹೂಗಾರ ಮುಂತಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement