ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕುಂದಗೋಳ: 21ರಂದು ಸಾಹಿತ್ಯ ಸಮ್ಮೇಳನ

Vishwanath S
Updated On : 18 Jun 2013, 11:03 am

ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ತಾಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನವನ್ನು ಜೂನ್ 21ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಚಂದ್ರಶೇಖರ ಪಾಟೀಲ ತಿಳಿಸಿದರು.
ಪಟ್ಟಣದ ಟೀಚರ್ಸ್ ಸೊಸೈಟಿಯಲ್ಲಿ 2ನೇ ತಾಲೂಕು ಸಾಹಿತ್ಯ ಸಮ್ಮೇಳ ಕುರಿತಂತೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ವಲಯ ಮಟ್ಟದ ಪದಾಧಿಕಾರಿಗಳ ಸಭೆ ಚರ್ಚಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪೂರ್ಣ ಸಕಲ ಸಿದ್ಧತೆ ಮಾಡಿಕ್ಕೊಳ್ಳಲಾಗಿದೆ. ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿ ಸತೀಶ ಕುಲಕರ್ಣಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಮುಂಜಾನೆ 9ಕ್ಕೆ ಗುಡಗೇರಿ ಗ್ರಾಮದ ಪದ್ಮಾವತಿ ಸಭಾ ಮಂಟಪದಲ್ಲಿ ನಡಯಲಿದ್ದು, ಗುಡಗೇರಿ ಗ್ರಾಮದೇವತೆ ಮಹಾದ್ವಾರ ಹಾಗೂ ಖ್ಯಾತ ರಂಗಭೂಮಿ ಕಲಾವಿದ ದಿ. ಎನ್. ಬಸವರಾಜ ಮಹಾ ವೇದಿಕೆ ರೂಪಿಸಲಾಗಿದೆ. ಜಿಪಂ ಸದಸ್ಯ ವೆಂಕನಗೌಡ ಹಿರೇಗೌಡ್ರ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಪರಿಷತ್ತಿನ ಧ್ವಜ ಹಸ್ತಾಂತರದ ಮೂಲಕ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೆಳಗ್ಗೆ 9.30ಕ್ಕೆ ಡಾ. ಶ್ಯಾಮ್ ಸುಂದರ ಬಿದರಕುಂದಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸುವರು. ಶಾಸಕ ಸಿ.ಎಸ್. ಶಿವಳ್ಳಿ ಸನ್ಮಾನ ಸ್ಪೀಕರಿಸುವರು. ಸಂಸದ ಪ್ರಹ್ಲಾದ್ ಜೋಶಿ ಕವನ ಸಂಕಲನ ಬಿಡುಗಡೆ ಮಾಡುವರು. 12ಕ್ಕೆ ಕುಂದಗೋಳ ತಾಲೂಕು ಸಾಂಸ್ಕೃತಿಕ ನೆಲೆಗಳ ಕುರಿತಂತೆ ಮೊದಲ ಗೋಷ್ಠಿ ನಡೆಯಲಿದ್ದು, ಎಚ್.ಬಿ. ಪಂಚಾಕ್ಷರಯ್ಯ ಅಧ್ಯಕ್ಷತೆ ವಹಿಸುವರು. ಜಾನಪದ ನೆಲೆಗಟ್ಟುಗಳ ಕುರಿತು ಡಾ. ಜಿನದತ್ತ ಹಡದಲಿ ಹಾಗೂ ಸಾಂಸ್ಕೃತಿಕ ನೆಲೆಗಟ್ಟು ಕುರಿತು ಪ್ರೊ. ಎಫ್.ಬಿ. ಸೂರಟೂರ ಉಪನ್ಯಾಸ ನೀಡುವರು. ಮಧ್ಯಾಹ್ನ 2.30ಕ್ಕೆ 2ನೇ ಗೋಷ್ಠಿ ನಡೆಯಲಿದ್ದು, ಎನ್.ಎಂ. ಸುನಂದಾ ಅಧ್ಯಕ್ಷತೆ ವಹಿಸಲಿದ್ದು, ಶಿವಶರಣೆಯರು ಕಂಡ ಕಾಯಕ ತತ್ವ ಕುರಿತು ಡಾ. ದ್ರಾಕ್ಷಾಯಿಣಿ ಉಡಕೇರಿ, ಮಹಿಳೆ ಮತ್ತು ಬದುಕು ಕುರಿತು ಯಮುನಾ ಗಾಂವಕರ ಉಪನ್ಯಾಸ ನೀಡಲಿದ್ದಾರೆ. ಸಂಜೆ 4ಕ್ಕೆ ಕವಿಗೋಷ್ಠಿ ನಡೆಯಲಿದ್ದು, ಎಂ.ಡಿ. ಗೋಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ರೇಣುಕಾ ಡೂಳ್ಳಿನ, ನಿಂಗಪ್ಪ ಬೆಣ್ಣಿ, ಗಣೇಶ ಏಸುಗಡೆ, ಪಿ.ಆರ್. ಹೊಸಮನಿ, ಎಸ್.ಎನ್. ಮುಗಳಿ, ರಾಕೇಶ ದ್ಯಾವನಗೌಡ್ರ, ಆರ್.ಡಿ. ಕುಲಕರ್ಣಿ, ಅನುರಾಧಾ ಕುಲಕರ್ಣಿ, ಶರೀಫ ಚಿಗಳ್ಳಿ, ಅಶೋಕ ಈರಗಾರ, ಸಿ.ಡಿ. ಹಳೇಮನಿ, ಅನುಸೂಯಾ ಹಿರೇಮಠ, ರಾಘವೇಂದ್ರ ಬಳ್ಳಾರಿ ಕವನ ವಾಚಿಸಲಿದ್ದಾರೆ.
ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಿ.ವಿ. ಬೆಳ್ಳಕ್ಕಿ ಸಮಾರೋಪ ಭಾಷಣ ಹಾಗೂ ಸತೀಶ ಕುಲಕರ್ಣಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ಸಂಜೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಾ. ರಾಮು ಮೂಲಗಿ ಉದ್ಘಾಟಿಸುವರು. ಎಸ್.ಎಸ್. ಹಿರೇಮಠ ಹಾಗೂ ಸಂಗಡಿಗರಿಂದ ಜಾನಪದ ಹಾಗೂ ಜಾಗೃತಿ ಗೀತೆ, ವೀರೇಶ ಬಡಿಗೇರ ಹಾಗೂ ಸಂಗಡಿಗರಿಂದ ತತ್ವ ಪದಗಳು, ವಿ.ವೈ. ಮೂಳ್ಳೂರು ಮತ್ತು ಸಂಗಡಿಗರಿಂದ ಗೀಗೀ ಪದಗಳು, ವಿಜಯಲಕ್ಷ್ಮೀ ಮಾಳವಾಡ ವಚನಗಾಯನ ನಡೆಸಿಕೊಡಲಿದ್ದಾರೆ.  ತಾಲೂಕಿನ ಎಲ್ಲ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚಂದ್ರಶೇಖರ ಪಾಟೀಲ ಹೇಳಿದರು. ಎ.ಬಿ. ಉಪ್ಪಿನ, ಎಸ್.ಕೆ. ಗದಗಿನಮಠ, ಎಂ.ಟಿ. ಅಕ್ಕಿ, ಸಿದ್ದಣ್ಣ ಹಳೆಮನಿ, ಜಿ.ಡಿ. ಘೋರ್ಪಡೆ, ಜೋತಿಬಾ ಕೈರಾಯಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement