ಬಸ್- ಕಾರಿಗೆ ಡಿಕ್ಕಿ: ಇಬ್ಬರ ಸಾವು
ಯಲ್ಲಾಪುರ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಇಂಡಿಕಾ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ರಾ.ಹೆ.ಯ ತೆಲಗೇರಿ ಬಳಿ ಭಾನುವಾರ ತಡರಾತ್ರಿ ಸಂಭವಿಸಿದೆ. ನವಲಗುಂದದ ನಿವಾಸಿಗಳಾದ ಕೊಟ್ರಪ್ಪ ಪುರಪ್ಪ ಜಾವು(55) ಹಾಗೂ ಈರಪ್ಪ ಕಲ್ಲಪ್ಪ ನಾರಾಯಣಪುರ(40) ಎಂಬವರೇ ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಶಿವಯ್ಯ ಮಲ್ಲಪ್ಪ ಮಠಪತಿ(30), ಗುರಪ್ಪ ಕೊಟ್ರಪ್ಪ ಜಾವು(29) ಹಾಗೂ ಮುತ್ತಪ್ಪ ವಡಕಪ್ಪ ಪೂಜಾರಿ ಗಾಯಗೊಂಡಿದ್ದಾರೆ. ಮೃತರು ಪಾಶ್ರ್ವವಾಯು ಪೀಡಿತರಿಗೆ ಔಷಧತರಲು ನವಲಗುಂದದಿಂದ ಕಾರವಾರಕ್ಕೆ ಪ್ರಯಾಣಿಸುತ್ತಿದ್ದರು. ಆಗ ಗಜೇಂದ್ರಗಡ-ಕಾರವಾರ ಬಸ್ ಹಿಂಬದಿಯಿಂದ ಡಿಕ್ಕಿ ಹೊಡಿದಿದೆ ಎಂದು ತಿಳಿದು ಬಂದಿದೆ. ಬಸ್ ಡ್ರೈವರ್ ಅಮರಪ್ಪ ಬಾಳಪ್ಪ ಹೊಸಮನಿ ಮೇಲೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.