ವರ್ಗಾವಣೆ: ತೀವ್ರತರ ಕಾಯಿಲೆ ನೌಕರರಿಗೆ ವೈದ್ಯಕೀಯ ತಪಾಸಣೆ
ಧಾರವಾಡ: ಪ್ರಸಕ್ತ ವರ್ಷದ ವರ್ಗಾವಣೆಗಳಲ್ಲಿ ತೀವ್ರತರ ಕಾಯಿಲೆ ಪ್ರಕರಣಗಳ ಅಡಿಯಲ್ಲಿ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿರುವ ಪತ್ರಾಂಕಿತ ಬಿ ವೃಂದದ ಅಧಿಕಾರಿಗಳು ಹಾಗೂ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳಿಗೆ ಬೆಳಗಾವಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜೂ.24 ಮತ್ತು 25ರಂದು ವೈದ್ಯಕೀಯ ತಪಾಸಣೆ ಜರುಗಲಿದೆ. ಸರ್ಕಾರದ ಆದೇಶದಂತೆ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು 2007ರಂತೆ ಕೌನ್ಸೆಲಿಂಗ್ ಮೂಲಕ ನಡೆಸುವ ವರ್ಗಾವಣೆಯಲ್ಲಿ ತೀವ್ರ ಕಾಯಿಲೆಯ ಪ್ರಕರಣದಲ್ಲಿ (ಕ್ಯಾನ್ಸರ್, ಕಿಡ್ನಿ ವೈಫಲ್ಯ ಹಾಗೂ ಹೃದಯ ಸಂಬಂಧಿ ಕಾಯಿಲೆ) ಈ ಬಾರಿಯೂ ವೈದ್ಯಕೀಯ ತಪಾಸಣೆಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯ.