ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಿಎಂ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿ

Lingaraj Badiger
Updated On : 25 Jun 2013, 10:47 am

ಧಾರವಾಡ: ಮುಖ್ಯಮಂತ್ರಿಯಾದರೆ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಹಣ ಮರಳಿ ಪಡೆಯಲು ವಿಶೇಷ ಕಾನೂನು ಮತ್ತು ವಿಶೇಷ ನ್ಯಾಯಾಲಯ ಸ್ಥಾಪಿಸಿ ಅಕ್ರಮದಲ್ಲಿ ತೊಡಗಿದ ಗಣಿ ಮಾಲೀಕರು, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ ವರ್ಗದ ಎಲ್ಲ ಗಣಿ ಕಂಪನಿಗಳಿಂದ ಅಕ್ರಮ ಸಂಪಾದನೆಯನ್ನು ಸರ್ಕಾರ ಮರಳಿ ಪಡೆಯಬೇಕು ಹಾಗೂ ಅಕ್ರಮ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಈಗಾಗಲೇ ಗಣಿ ಕಂಪನಿಗಳು ಮಾಡಿದಂತಹ ಅಕ್ರಮ ಸಂಪಾದನೆಯನ್ನು ಬಡ್ಡಿ ಸಮೇತವಾಗಿ ಸರ್ಕಾರದ ಬೊಕ್ಕಸಕ್ಕೆ ತರಬೇಕಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿದರು.
ಪರಿಸರ ಸೂಕ್ಷ್ಮ ಪ್ರದೇಶ: ಸುಪ್ರೀಂ ಕೋರ್ಟ್ ಆದೇಶದಲ್ಲಿ ಸಿ ವರ್ಗದ 51 ಗಣಿ ಕಂಪನಿಗಳನ್ನು ರದ್ದು ಪಡಿಸಿದ್ದು, ಇವುಗಳಿಗೆ ಪುನರ್ ಗಣಿಗಾರಿಕೆ ಮಾಡಲು ಅವಕಾಶ ಕೊಡಬಾರದು ಹಾಗೂ ಗಣಿ ಕೊರೆದ ಪರಿಸರವನ್ನು ಪುನಃ ಚೇತನಗೊಳ್ಳಲು ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಅರಣ್ಯ, ವನ್ಯ ಜೀವಿ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದು ಸಂಡೂರಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಸರ್ಕಾರದ ಮೇಲೆ ಒತ್ತಡ ತರಲಾಗಿದೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಕಾದು ನೋಡೋಣ ಎಂದರು.
ಸಮ್ಮೇಳನ: 60ಕ್ಕೂ ಹೆಚ್ಚು ಜನರು ಸಂಡೂರು ಸುತ್ತ ಮುತ್ತಲಿನ ಪುರುಷ ಹಾಗೂ ಮಹಿಳೆಯರು ತರಬೇತಿ ಪಡೆದು ಬರುವ ಆ. 12ರಂದು ಅಕ್ರಮ ಭೂ ಒತ್ತುವರಿ ಹಾಗೂ ಗಣಿಗಾರಿಕೆ ಕುರಿತು ಹೋರಾಟದ ರೂಪುರೇಷ ಹಾಕಿಕೊಳ್ಳಲಾಗಿದೆ. ಅಲ್ಲದೇ ಅಕ್ಟೋಬರ್ 11ರಂದು ಜಯಪ್ರಕಾಶ ನಾರಾಯಣರ ಜನ್ಮದಿನ ಜನ ಸಂಗ್ರಾಮ ಪರಿಷತ್ತಿನಿಂದ ದಾವಣಗೆರೆಯಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅಕ್ರಮ ಗಣಿಗಾರಿಕೆ, ಅನ್ಯಾಯದ ಭೂ ಸ್ವಾಧೀನ ಹಾಗೂ ಭ್ರಷ್ಟಾಚಾರ ವಿಷಯಗಳ ವಿರುದ್ಧ ಕುರಿತು ಸಮಗ್ರ ಚರ್ಚೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಎಸ್.ಆರ್. ಹಿರೇಮಠ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement