ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿ: ಆದಿಬಣಜಿಗ ಸಮಾಜದ ಸಭೆ 30ಕ್ಕೆ

Lingaraj Badiger
Updated On : 25 Jun 2013, 10:49 am

ಹುಬ್ಬಳ್ಳಿ: ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿಯ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಘಟಕಗಳ ಸಭೆಯನ್ನು ನಗರದ ಗೋಕುಲ ರಸ್ತೆಯ ಕೆಎಸ್‌ಆರ್‌ಟಿಸಿ ಸಾಮ್ರಾಟ್ ಹಾಲ್‌ನಲ್ಲಿ ಜೂ. 30ರಂದು ಕರೆಯಲಾಗಿದೆ. ನಗರದಲ್ಲಿ ಇತ್ತೀಚೆಗೆ ನಡೆದ ಸಮಿತಿಯ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಘಟಕಗಳ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಯಿತು. ಸೊಸೈಟಿ ರಚನೆ, ಮಹಿಳಾ ಘಟಕದ ರಚನೆ, ವಧು-ವರರ ಸಮಾವೇಶ ಹಾಗೂ ವಧುವರರ ಮಾಹಿತಿ ಕೇಂದ್ರ ಸ್ಥಾಪನೆ, ಆದಿ ಬಣಜಿಗ ಮಾಸ ಪತ್ರಿಕೆ ಪ್ರಕಟಣೆ, ಆದಿ ಬಣಜಿಗ ವೆಬ್‌ಸೈಟ್ ತೆರೆಯುವುದು, ಆದಿ ಬಣಜಿಗ ಸಮಾಜವನ್ನು 2ಎ ದಲ್ಲಿ ಸೇರಿಸಲು ಸರ್ಕಾರಕ್ಕೆ ಒತ್ತಾಯಿಸುವುದು, ಸಮಾಜದ ಜನಗಣತಿ, ನೂತನ ಕಚೇರಿಯ ಉದ್ಘಾಟನೆ ಹಾಗೂ ಸಮಾಜದ ದಿವಂಗತ ಸಂಸ್ಥಾಪಕ ಹಿರಿಯರುಗಳ ಭಾವಚಿತ್ರ ಅನಾವರಣ ಮಾಡುವ ಕುರಿತು ಜೂ. 30ರಂದು ನಡೆಯುವ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಯಿತು. ಸಮಿತಿ ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ, ಗುರುಸಿದ್ದಪ್ಪ ಹವಾಲ್ದಾರ, ಬಿ.ಎಂ. ಜಾಬಣ್ಣವರ, ಮಲ್ಲಿಕಾರ್ಜುನ ಗುರನಳ್ಳಿ, ನಿಂಗಪ್ಪ ಜಠಾರ, ಬಸವರಾಜ ಪೀರಣ್ಣವರ, ಮಹಾದೇವಿ ಅಕ್ಕಿ ಮತ್ತಿತರರು ಹಾಜರಿದ್ದರು.
ಪರಿಷ್ಕೃತ ಪಠ್ಯಕ್ರಮ
ಧಾರವಾಡ: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಪ್ರಥಮ ಪಿಯುಸಿಗೆ ಪರಿಷ್ಕೃತ ಪಠ್ಯಕ್ರಮ ಜಾರಿಗೊಳ್ಳಲಿದೆ. ಈ ಕುರಿತಂತೆ ಜೂ. 24ರಿಂದ ಜುಲೈ 2ರ ವರೆಗೆ ಹಾಗೂ ಜುಲೈ 15ರಿಂದ 25ರ ವರೆಗೆ 18 ದಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿಪೂರ್ವಕಾಲೇಜುಗಳ ಉಪನ್ಯಾಸಕರು ದೂರಸಂಪರ್ಕ ಉಪಗ್ರಹ ಆಧಾರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿನ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದ ಬಿಆರ್‌ಸಿ ಕೇಂದ್ರದಲ್ಲಿ ತರಬೇತಿ ಆಯೋಜಿಸಿದೆ. ಸಂಬಂಧಿಸಿದ ಕಾಲೇಜುಗಳ ಪ್ರಾಚಾರ್ಯರು ಬಿಇಓ ಕಚೇರಿ ಸಂಪರ್ಕಿಸಿ ಈ ಬಗ್ಗೆ ಕ್ರಮ ಜರುಗಿಸಲು ಡಿಡಿಪಿಐ ರವೀಂದ್ರ ರಿತ್ತಿ ತಿಳಿಸಿದ್ದಾರೆ.
ಡಿಇಡಿ ಪರೀಕ್ಷೆ ವೇಳಾಪಟ್ಟಿ
ಧಾರವಾಡ: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2013ರ ಜುಲೈನಲ್ಲಿ ನಡೆಸಲಿರುವ ಡಿಇಡಿ ಪ್ರಥಮ, ದ್ವಿತೀಯ ವರ್ಷಗಳ ವಾರ್ಷಿಕ ಪರೀಕ್ಷೆ  ವೇಳಾಪಟ್ಟಿ ಪ್ರಕಟಿಸಿದೆ. ಡಿಇಡಿ ಪ್ರಥಮ ವರ್ಷದ ಪರೀಕ್ಷೆ ಜು. 4ರಿಂದ 11, ದ್ವಿತೀಯ ವರ್ಷದ ಪರೀಕ್ಷೆ ಜು. 5ರಿಂದ 12ರ ವರೆಗೆ ಜರುಗಲಿದೆ. ಡಿ.ಪಿ.ಇಡಿ. ಪರೀಕ್ಷೆ ಜು. 2ರಿಂದ 12ರ ವರೆಗೆ ನಡೆಯಲಿವೆ. ಪೂರ್ವ ಪ್ರಾಥಮಿಕ ಶಿಕ್ಷಣದ ಪಿ.ಪಿ.ಟಿ ತರಬೇತಿ ವಾರ್ಷಿಕ ಪರೀಕ್ಷೆ ಜು. 4ರಿಂದ 8ರ ವರೆಗೆ ನಡೆಯಲಿದ್ದು, ರವಿವಾರ ಬಿಟ್ಟು ನಿತ್ಯಒಂದೊಂದು ವಿಷಯದ ಪರೀಕ್ಷೆ ನಡೆಯಲಿವೆ. ಎಲ್ಲ ಡಿಇಡಿ ಪ್ರಶಿಕ್ಷಣಾರ್ಥಿಗಳು ವಿಷಯವಾರು ವೇಳಾಪಟ್ಟಿಯನ್ನು ತಮ್ಮ ಕಾಲೇಜಿನಿಂದ ಪಡೆಯಬೇಕೆಂದು ಜಿಲ್ಲಾ ಶಿಕ್ಷಣ-ತರಬೇತಿ ಸಂಸ್ಥೆ ಪ್ರಾಚಾರ್ಯ ಎಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement