ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆಶ್ರಯ ಮನೆ ಮಾರಾಟ ಅಕ್ರಮ: ಡಿಸಿ

Lingaraj Badiger
Updated On : 26 Jun 2013, 10:50 am

'ಕನ್ನಡಪ್ರಭ'ದ ಆಶ್ರಯ ಅಕ್ರಮ ಸರಣಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸಮೀರ ಶುಕ್ಲ ಅವರು, ವಿವಿಧ ಯೋಜನೆಗಳಡಿ ಬಡವರಿಗೆ ಸರ್ಕಾರ ಸೂರು ನೀಡುವ ಕೆಲಸ ಮಾಡುತ್ತಿದ್ದು, ಸರ್ಕಾರದಿಂದ ಪಡೆದಿರುವ ಇಂತಹ ಮನೆಗಳ ಮಾರಾಟಕ್ಕೆ ಅವಕಾಶವಿಲ್ಲ ಎಂದಿದ್ದಾರೆ.  ಒಂದು ವೇಳೆ ರಾಮನಗರ, ವಾಜಪೇಯಿ ನಗರ ಮತ್ತು ಜಗದೀಶ ನಗರಗಳ ಆಶ್ರಯ ಮನೆಗಳನ್ನು ಫಲಾನುಭವಿಗಳು ನಿಯಮ ಉಲ್ಲಂಘಿಸಿ ಮಾರಾಟ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ನೀಡುವ ಜಮೀನು, ಮನೆಗಳ ಪರಭಾರೆಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನಿಯಮಾವಳಿಗಳಂತೆ ಈ ಯೋಜನೆಗೂ ಕೆಲವು ನಿಯಮಾವಳಿಗಳನ್ನು ಸರ್ಕಾರ ರೂಪಿಸಿದೆ.  ಯಾವುದಕ್ಕೂ ಆಶ್ರಯ ಮನೆಗಳ ಮಾರಾಟ ನಡೆಯುತ್ತಿದ್ದರೆ ಪರಿಶೀಲನೆ ಮಾಡುತ್ತೇನೆ. ಒಂದು ವೇಳೆ ಈಗಾಗಲೇ ಮಾರಾಟ ಪ್ರಕ್ರಿಯೆ ನಡೆದಿದ್ದರೆ ಅಂತಹ ಮನೆಗಳನ್ನು ಜಿಲ್ಲಾಡಳಿತ ತನ್ನ ವಶಕ್ಕೆ ತೆಗೆದುಕೊಂಡು ಫಲಾನುಭವಿ ಮತ್ತು ಖರೀದಿದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement