ದ್ವಾದಶ ರಂಗಪ್ರವೇಶ
ಧಾರವಾಡ: ಉಪಾಧ್ಯೆ ನೃತ್ಯ ವಿಹಾರ ವತಿಯಿಂದ ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ಜೂ. 29ರ ಸಂಜೆ 5ಕ್ಕೆ ದ್ವಾದಶ ರಂಗಪ್ರವೇಶದ 6ನೇ ಕಾರ್ಯಕ್ರಮ ನಡೆಯಲಿದೆ. ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸಲಿದ್ದಾರೆ. ವಿದುಷಿ ರೋಹಿಣಿ ಇಮಾರತಿ ಉದ್ಘಾಟಿಸುವರು. ವೆಂಕಟೇಶ ಮುತ್ತಣ್ಣವರ, ರೋಹಿಣಿ ಭಟ್ ಆಗಮಿಸಲಿದ್ದಾರೆ.
ತರಬೇತಿ ಕೇಂದ್ರ ಆರಂಭ
ಧಾರವಾಡ: ಎಸ್ಡಿಎಂ ಕೈಗಾರಿಕಾ ತರಬೇತಿ ಶಿಕ್ಷಣ ಸಂಸ್ಥೆ ಇಲ್ಲಿನ ಸತ್ತೂರ ಬಳಿ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ಸಂಸ್ಥೆ ಆರಂಭಗೊಳಿಸಿದೆ. ಆಸಕ್ತರಿಗೆ ಅರ್ಜಿ ಆಹ್ವಾನಿಲಾಗಿದ್ದು, ಹೆಚ್ಚಿನ ಮಾಹಿತಿಗೆ ದೂ. 99644 -40291 ಅಥವಾ 0836 2466266 ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.
ಕಂಪ್ಯೂಟರ್ ತರಬೇತಿ
ಧಾರವಾಡ: ಎಸ್.ಜಿ ಕಂಪ್ಯೂಟರ್ ಅಕಾಡೆಮಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗಾಗಿ ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಿದೆ. ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಟ್ಯಾಲಿ, ವೆಬ್ ಡಿಸೈನಿಂಗ್, ಡಿಟಿಪಿ ತರಬೇತಿಗಳನ್ನು ನೀಡಲಾಗುತ್ತಿದೆ. ಆಸಕ್ತರು ಮೊ. 95388-78265 ಸಂಪರ್ಕಿಸಿ.
ಸರಗಳ್ಳರ ಬಂಧನ
ಹುಬ್ಬಳ್ಳಿ: ಲಿಂಗರಾಜ ನಗರ ಸಮುದಾಯ ಭವನದ ಬಳಿ ಕೆಲವು ದಿನಗಳ ಹಿಂದೆ ಸಂಭವಿಸಿದ್ದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಮತ್ತು ಅಭಿನವ ನಗರದ ಬಳಿ ಯುವತಿಯ ಕೊರಳಲ್ಲಿದ್ದ ಚಿನ್ನದ ಸರ ದೋಚಿಕೊಂಡು ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಸಾಯಿ ನಗರದ ಸಂಜಯ ಅಲಿಯಾಸ್ ಸಂಜ್ಯಾ ದಿವಾಕರ ಜಿರಳೆ ಮತ್ತು ಪಾಂಡು ಈರಪ್ಪ ಜಾಲಗಾರ ಎಂದು ಗುರುತಿಸಲಾಗಿದೆ. ತಮ್ಮ ತಂದೆಯ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಲ್ಯಾಣ ನಗರದದಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದ ಗೀತಾ ಲಕ್ಕುಂಡಿ ಅವರ ಕೊರಳಲ್ಲಿದ್ದ 22 ಗ್ರಾಂನ ರು. 60 ಸಾವಿರ ಮೌಲ್ಯದ ಚಿನ್ನದ ಸರ ಮತ್ತು ಒಂದು ಬಜಾಜ್ ಪಲ್ಸರ್ ಬೈಕ್ನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯ ಅಭಿನವ ನಗರದ ಬಳಿ ನಡೆದುಕೊಂಡು ಹೋಗುತ್ತಿದ್ದ ಜಯಶ್ರೀ ಪಾಟೀಲ ಎನ್ನುವ ಯುವತಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ದೋಚಿಕೊಂಡು ಪರಾರಿಯಾಗಲು ಯತ್ನಿಸಿದ ದೇವರಾಮ ಜಾಧವ ಎನ್ನುವ ವ್ಯಕ್ತಿಯನ್ನು ಸಿದ್ಧಾರೂಢಮಠದ ಬಳಿ ಪೊಲೀಸರು ಬಂಧಿಸಿದ್ದಾರೆ.