ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕಣವಿ ನೂರು ವರ್ಷ ಬಾಳಲಿ: ಶೆಟ್ಟರ್

Vishwanath S
Updated On : 29 Jun 2013, 11:41 am

ಧಾರವಾಡ: ಕಾವ್ಯ ಪ್ರಪಂಚದಲ್ಲಿ ಅತ್ಯುನ್ನತ ಹೆಸರು ಮಾಡಿರುವ ನಾಡೋಜ ಚೆನ್ನವೀರ ಕಣವಿ ಅವರು ನೂರು ವರ್ಷಗಳ ಕಾಲ ಹರ್ಷದಿಂದ ಬಾಳಲಿ. ಸದಾಕಾಲ ನಮಗೆ ಮಾರ್ಗದರ್ಶನ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಶುಭ ಹಾರೈಸಿದರು.
ಚೆನ್ನವೀರ ಕಣವಿ ಅವರಿಗೆ ಶುಕ್ರವಾರ 85ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಕಲ್ಯಾಣ ನಗರದ ಅವರ ಮನೆಗೆ ಭೇಟಿ ನೀಡಿ, ಶುಭಾಶಯ ಕೋರಿದರು. ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ಪ್ರಹ್ಲಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಮಹಾನಗರ ಜಿಲ್ಲಾ ಅಧ್ಯಕ್ಷ ಮಹೇಶ ಟೆಂಗಿನಕಾಯಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಪೂರ್ಣಾ ಪಾಟೀಲ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಶಂಕರ ಶೇಳಕೆ, ಮಾಜಿ ಸದಸ್ಯರಾದ ವೀರೇಶ ಅಂಚಟಗೇರಿ, ಪ್ರಕಾಶ ಗೋಡಬೋಲೆ ಕಣವಿಯವರಿಗೆ ಶುಭ ಕೋರಿದರು. ಬೆಳಗ್ಗೆ 8ರಿಂದ ಮಧ್ಯಾಹ್ನದವರೆಗೆ ಸಾಹಿತಿಗಳು, ವಿದ್ಯಾರ್ಥಿಗಳು, ರಾಜಕಾರಣಿಗಳು ಶುಭಾಶಯ ಕೋರಿದರು.

ಕಾವ್ಯವಾಚನ: ಕಣವಿ ಅವರ ಜನ್ಮದಿನದ ನಿಮಿತ್ತ ಸಂಜೆ ಸೃಜನ ಚಿಂತನ ಬಳಗ ಹಾಗೂ ಬಸವರಾಜ ಕಟ್ಟಿಮನಿ ವಿಚಾರ ವೇದಿಕೆಯಿಂದ ನಗರದಲ್ಲಿ ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರ ಅಧ್ಯಕ್ಷತೆಯಲ್ಲಿ ಕಾವ್ಯವಾಚನ ಗೋಷ್ಠಿ ಜರುಗಿತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement