ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಕಲಿ ಮೊಬೈಲ್ ಜಾಲ: 10 ಮಂದಿ ಬಂಧನ

Vishwanath S
Updated On : 29 Jun 2013, 1:13 am

ದಾವಣಗೆರೆ/ ಹೊನ್ನಾಳಿ:  ನೋಕಿಯಾ, ಸ್ಯಾಮ್‌ಸಂಗ್‌ನಂತಹ ಹೆಸರಾಂತ ಕಂಪನಿಗಳ ನಕಲಿ ಮೊಬೈಲ್‌ಗಳನ್ನು ಮಾರಾಟ ಮಾಡಿ, ಜನರಿಗೆ ವಂಚಿಸುತ್ತಿದ್ದ ಮಹಾರಾಷ್ಟ್ರ ಮೂಲದ 10 ಮಂದಿಯ ತಂಡವನ್ನು ಹೊನ್ನಾಳಿ ಪೊಲೀಸರು ದಾವಣಗೆರೆ ನಗರದ ಲಾಡ್ಜ್‌ವೊಂದರಲ್ಲಿ ಬಂಧಿಸಿ, 35,500 ರು. ನಗದು, 115 ಮೊಬೈಲ್ ಮತ್ತು ಬಿಡಿ ಭಾಗಗಳು, 5 ಬೈಕ್ ಜಪ್ತು ಮಾಡಿದ್ದಾರೆ.
 ಮಹಾರಾಷ್ಟ್ರದ ನವಲ್‌ಸಿಂಗ್, ಹರಿಸಿಂಗ್ ಪವಾರ್, ದೀಪಕ್ ಜಾಧವ್, ಪೂನಾಲಾಲ್, ಚಂದ್ರಸಿಂಗ್ ಪವಾರ್, ಬ್ಯಾರಿಲಾಲ್ ಜಾಧವ್, ಸುನಿಲ್ ಪವಾರ್, ಲಕ್ಷ್ಮಣ ಜಾಧವ್, ಚಂದನ್ ಜಾಧವ್ ಹಾಗೂ ಬಾಲು ಜಾಧವ್ ಬಂಧಿತ ಆರೋಪಿಗಳು.
ಪೋಲೀಸರ ದಾಳಿ: ಹೊನ್ನಾಳಿ ತಾ. ತರಗನಹಳ್ಳಿ ಗ್ರಾಮದಲ್ಲಿ ನೋಕಿಯಾ ಕಂಪನಿ ಮೊಬೈಲ್‌ಗಳೆಂಬು ನಂಬಿಸಿ, ತರಕಾರಿ, ಸೊಪ್ಪನ್ನು ಮಾರಿದಂತೆ ಆರೋಪಿಗಳು ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ನೋಕಿಯಾ, ಸ್ಯಾಮ್‌ಸಂಗ್ ಕಂಪನಿ ಹೆಸರಿನಲ್ಲಿ ನಕಲಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದ ವಿಚಾರವನ್ನು ಆರೋಪಿಗಳು ಬಾಯಿ ಬಿಟ್ಟಿದ್ದರು.
 ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ರಾಜ್ಯವೂ ಸೇರಿದಂತೆ ವಿವಿಧೆಡೆ ವ್ಯವಸ್ಥಿತವಾಗಿ ಹೆಸರಾಂತ ಕಂಪನಿಗಳ ನಕಲಿ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿರುವುದನ್ನು ಬಹಿರಂಗಪಡಿಸಿದ್ದಾರೆ. ಆರೋಪಿಗಳು ನೀಡಿದ ಸುಳಿವನ್ನು ಆದರಿಸಿ ದಾವಣಗೆರೆಯ ರತನ್ ಲಾಡ್ಜ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿ ನಕಲಿ ಮೊಬೈಲ್ ಮಾರಾಟ ಜಾಲದ
ಇತರೆ ಎಂಟು ಮಂದಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದರು.
 ಹೊನ್ನಾಳಿ ಸಿಪಿಐ ಹೊನ್ನಪ್ಪ ನೇತೃತ್ವದಲ್ಲಿ ಸಬ್ ಇನ್ಸಪೆಕ್ಟರ್ ಬಿ.ಜಿ. ಕುಮಾರಸ್ವಾಮಿ, ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement