ಜಿಲ್ಲಾಧಿಕಾರಿಗೆ ಮನವಿ
ಧಾರವಾಡ: ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನವನ್ನು ಬೇಗ ಸಜ್ಜುಗೊಳಿಸಬೇಕೆಂದು ಒತ್ತಾಯಿಸಿ ಇಲ್ಲಿನ ರಂಗಭೂಮಿ ಪುರೋಭಿವೃದ್ದಿ ಸಮಿತಿ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಧಾರವಾಡ ಸಾಂಸ್ಕೃತಿಕ ನಗರವಾಗಿರುವುದರಿಂದ ಅವಳಿನಗರದಲ್ಲಿ ಸುಮಾರು 20ರಿಂದ 25 ಸಾಂಸ್ಕೃತಿಕ ತಂಡಗಳಿವೆ. ಅಲ್ಲದೆ, ರಾಜ್ಯದ ಎರಡನೇ ಸಾಂಸ್ಕೃತಿಕ ನಗರ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರವಿದ್ದಂತೆ ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನವಿದೆ. ಈ ಕಲಾಕ್ಷೇತ್ರದ ಕಾಮಗಾರಿ ಪೂರ್ಣಗೊಳಿಸಬೇಕು. ಪ್ರಸ್ತುತ ಕಲಾತಂಡಗಳು ಪ್ರದರ್ಶನ ನೀಡುವಾಗ ವಿವಿಧ ಥೇಟರಗಳಿಗೆ ಹೆಚ್ಚಿನ ಬಾಡಿಗೆ ಭರಿಸಿ ಪ್ರದರ್ಶನ ನೀಡಬೇಕಿದೆ. ಆದ್ದರಿಂದ, ಈ ಕಲಾಕ್ಷೇತ್ರದಲ್ಲಿ ಕಲಾತಂಡಗಳಿಗೆ ತಾಲೀಮು ನಡೆಸಲು ಕೊಠಡಿ ನಿರ್ಮಿಸಿಕೊಡಬೇಕೆಂದು ಪ್ರತಿಭಟನಾಕಾರರೂ ಒತ್ತಾಯಿಸಿದರು. ರಂಗಭೂಮಿ ಪುರೋಭಿವೃದ್ದಿ ಸಮಿತಿ ಅಧ್ಯಕ್ಷರಾದ ಬಿ.ಐ. ಈಳಗೇರಿ, ಎಸ್.ಎಸ್. ಚಿಕ್ಕಮಠ, ಜಗುಚಂದ್ರ ಕೂಡ್ಲ ಇದ್ದರು.