ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಂಗಗೀತೆ ತರಬೇತಿ ಶಿಬಿರ

Rashmi Kasaragodu
Updated On : 30 Jun 2013, 1:03 am

ಧಾರವಾಡ: ರಂಗಗೀತೆಯ ಪರಂಪರೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಬಾಲನಂದನ ಟ್ರಸ್ಟ್ ಜಂಟಿಯಾಗಿ ಹಮ್ಮಿಕೊಂಡಿರುವ ಒಂದು ದಿನದ ರಂಗಗೀತೆ ತರಬೇತಿ ಶಿಬಿರ ಜೂ. 30ರಂದು ಬೆಳಗ್ಗೆ 9ಕ್ಕೆ ಇಲ್ಲಿನ ಜೆಎಸ್ಎಸ್ ಉತ್ಸವ ಸಭಾಭವನದಲ್ಲಿ ನಡೆಯಲಿದೆ.  ತರಬೇತಿ ಶಿಬಿರವನ್ನು ಖ್ಯಾತ ರಂಗತಜ್ಞ ಬಸವಲಿಂಗಯ್ಯ ಹಿರೇಮಠ ರಂಗಗೀತೆ ಹಾಡುವ ಮೂಲಕ ಉದ್ಘಾಟಿಸಲಿದ್ದಾರೆ. ರಂಗ ತಜ್ಞರಾದ ವಿಶ್ವೇಶ್ವರಿ ಹಿರೇಮಠ, ಬಾಲನಂದನ ಟ್ರಸ್ಟ್ ಅಧ್ಯಕ್ಷೆ ಪ್ರೀತಿ. ಎನ್.ಕೆ., ಶಿವಮೊಗ್ಗದ ಭಾವಪಯಣ ತಂಡದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹಿನ್ನಲೆ ಗಾಯಕ ದೀಪಕ್ ಶಿವಮೊಗ್ಗ ಹಾಗೂ ಗಾಯಕಿ ಸಹನಾ ಭಟ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಪ್ರಾಚಾರ್ಯ ಡಾ. ಅಜಿತ ಪ್ರಸಾದ ಅಧ್ಯಕ್ಷತೆ ವಹಿಸಲಿದ್ದಾರೆ.  ಇದೇ ವೇಳೆ ವಿದೇಶದಲ್ಲೂ ರಂಗಗೀತೆಯ ಕಂಪು ಹರಡಿಸಿದ ರಂಗತಜ್ಞ ಬಸವಲಿಂಗಯ್ಯ ಹಿರೇಮಠ ಹಾಗೂ ವಿಶ್ವೇಶ್ವರಿ ಹಿರೇಮಠ ದಂಪತಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಜೆಎಸ್ಎಸ್ ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾಧ್ಯೆ ತಿಳಿಸಿದ್ದಾರೆ.
ಅಪಘಾತ ಓರ್ವ ಸಾವು
ಧಾರವಾಡ: ಇಲ್ಲಿನ ರಾಯಾಪೂರ ಗೇಟ್ ಬಳಿ ನವಲೂರಿನಿಂದ ಅಮರಗೋಳ ಕಡೆ ಹೊರಟಿದ್ದ ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನೋರ್ವ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಅಮರಗೋಳ ಗ್ರಾಮದ ಮಲ್ಲಯ್ಯ ಬುರಲಿ(24) ಎಂಬಾತನೆ ಈ ರಸ್ತೆ ಅಪಘಾತದಲ್ಲಿ ಮೃತಪಟ್ಟ ದುದೈವಿ. ಪ್ರಕರಣ ದಾಖಲಿಸಿಕೊಂಡ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement