ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಾದಿರಾಜ್ ಕುಲಕರ್ಣಿ ಬಿರುಸಿನ ಪ್ರಚಾರ

Lingaraj Badiger
Updated On : 6 Mar 2013, 11:43 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 5
ಪಕ್ಷೇತರ ಅಭ್ಯರ್ಥಿಯಾಗಿ ವಾರ್ಡ್ ನಂ. 52ರಲ್ಲಿ ಕಣಕ್ಕಿಳಿದಿರುವ ವಾದಿರಾಜ ಕುಲಕರ್ಣಿ ಮಂಗಳವಾರ ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಸಿಬಿಟಿ ಕಿಲ್ಲಾ, ಕೋಳಿಪೇಟೆ, ಗಣೇಶಪೇಟೆ, ತರಕಾರಿ ಮಾರುಕಟ್ಟೆ, ತಬೀಬ ಲ್ಯಾಂಡ್, ಬಾಕಳೆ ಗಲ್ಲಿಯಲ್ಲಿ ಸಂಚರಿಸಿ ಮತ ಕೇಳಿದರು. ಇಲ್ಲಿ ಪ್ರಮುಖ ಪಕ್ಷಗಳ ಪೈಪೋಟಿಯ ನಡುವೆಯೂ ವಾದಿರಾಜ್ ಗಮನ ಸೆಳೆದಿದ್ದಾರೆ.
ಎಬಿಪಿವಿ ಸಂಘಟನೆಯಲ್ಲಿ ಕಳೆದ 12 ವರ್ಷಗಳಿಂದ ಸಕ್ರಿಯರಾಗಿ ಕಾರ್ಯ ಮಾಡುತ್ತಿರುವ ವಾದಿರಾಜ್ ಈ ಭಾಗದ ವಿದ್ಯಾರ್ಥಿಗಳ, ಯುವಕರ ಮನ ಗೆದ್ದಿದ್ದಾರೆ. ಡೊನೇಶನ್ ಹಾವಳಿ ವಿರುದ್ಧ ವಾದಿರಾಜ್ ಹೋರಾಟ ನಡೆಸಿದ್ದು ಗಣನೀಯ. ಈ ಕಾರಣದಿಂದಾಗಿ ವಾದಿರಾಜ್ ದೊಡ್ಡ ಯುವ ಬಳಗ ಹೊಂದಿದ್ದಾರೆ. ಜನಪರ ಕಾರ್ಯ ಕೈಗೊಳ್ಳಬೇಕೆಂಬ ತುಡಿತದಿಂದ ಬಂಧು-ಮಿತ್ರರ ಇಚ್ಛೆಯ ಮೇರೆಗೆ ಚುನಾವಣಾ ಕಣಕ್ಕಿಳಿದಿರುವ ವಾದಿರಾಜ್ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ವಾರ್ಡ್ ನಂ. 52ರಲ್ಲಿ ಬ್ರಾಹ್ಮಣರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಈ ಪ್ರಬಲ  ಮತದಾರರನ್ನು ಹೊಂದಿರುವ ಸಮುದಾಯಕ್ಕೆ ವಾದಿರಾಜ್ ಸೇರಿದವರಾಗಿರುವುದರಿಂದ ಜಾತಿ ಲೆಕ್ಕಾಚಾರದ ವಿಷಯ ಬಂದಾಗ ವಾದಿರಾಜ್ ಧನಾತ್ಮಕ ಫಲಿತಾಂಶ ಗಿಟ್ಟಿಸಿಕೊಳ್ಳಲಿದ್ದಾರೆ.
ಮನೆ ಮನೆ ಪ್ರಚಾರ ನಡೆಸಿದ ಅವರು, ತಾವು ಸಾಮಾಜಿಕ ಹೋರಾಟದಲ್ಲಿ ತೊಡಗಿಕೊಂಡಿದ್ದೇವೆ. ಅಧಿಕಾರದಲ್ಲಿದ್ದರೆ ಜನಪರ ಕಾರ್ಯ ಮಾಡಲು ಅನುಕೂಲವಾಗಲಿದೆ ಎಂಬ ದೃಷ್ಟಿಕೋನದಿಂದ ಚುನಾವಣಾ ಕಣಕ್ಕೆ ಧುಮುಕಿದ್ದೇನೆ. ವಾರ್ಡ್‌ನಲ್ಲಿ ಸಮಸ್ಯೆಗಳು ಎದುರಾದಾಗ ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟಿದ್ದೇನೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಮತ ನೀಡಿ ಗೆಲ್ಲಿಸಬೇಕೆಂದು ವಾದಿರಾಜ್ ಮನವಿ ಮಾಡಿದರು.
ವಿನಾಯಕ ಕರಿ, ದೀಪಕ ಕುಲಕರ್ಣಿ, ಮಯೂರ, ನಾಗಾರ್ಜುನ, ರೋಹಿತ ಮತ್ತಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement