ಇಂದು ಮಹಾಶಿವರಾತ್ರಿ
ಕಲಘಟಗಿ: ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ಮಾ. 10ರಂದು ಮುಂಜಾನೆ 11 ಗಂಟೆಗೆ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಪಟ್ಟಣದ ಕೋರ್ಟ್ ರಸ್ತೆ ಬಳಿಯ ವಿದ್ಯಾಗಿರಿ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ಆರಂಭಗೊಳ್ಳಲಿರುವ ಶಿವಯೋಗ ಶಿಬಿರದಲ್ಲಿ ಭಕ್ತ ಜನರು ಪಾಲ್ಗೊಳ್ಳಬೇಕೆಂದು ಬ್ರ.ಕು. ಸಕಲೇಶ್ವರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿತೂರಿ ರಾಜಿನಾಮೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ಭಾಸ್ಕರ್ ನಾರಾಯಣಸಾ ಜಿತೂರಿ ರಾಜಿನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿರುವ ಅವರು, ಪಕ್ಷದ ಎಲ್ಲ ಹೊಣೆಗಾರಿಕೆಯಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿದ್ದಾರೆ. ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಸ್ವಜಾತಿಯ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ಹಂಚಿಕೆ ಮಾಡುವ ಮೂಲಕ ಅನ್ಯ ಜಾತಿಯ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಎಂದೂ ಜಿತೂರಿ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಇಂದು ಸುನ್ನಿ ಇಜ್ತಿಮಾ
ಹುಬ್ಬಳ್ಳಿ: ನಗರದ ದಾವತ್ ಎ ಇಸ್ಲಾಮಿ ವತಿಯಿಂದ ಮಾ.10-ರಂದು ಈದ್ಗಾ ಮೈದಾನದಲ್ಲಿ ಸುನ್ನಿ ಇಜ್ತಿಮಾ ಹಮ್ಮಿಕೊಳ್ಳಲಾಗಿದೆ. ನಾಗ್ಪುರ ಷರಿಫನ ಧರ್ಮಗುರು ಮುಫ್ತಿ ಅಬ್ದುಲ್ ಹಲೀಮ್ ಸಿದ್ಧಿಕಿ ರಜ್ವಿ ಅವರು ಪ್ರವಚನ ನೀಡುವರು.
ಇಂದು ಶರಣ ಗಣ ಮೇಳ
ಹುಬ್ಬಳ್ಳಿ: ನಗರದ ಶ್ರೀನಗರ ಕ್ರಾಸ್ ಬಳಿ ಇರುವ ಬಸವ ಮಂಟಪದಲ್ಲಿ ಮಾ. 10ರಂದು ಬೆಳಗ್ಗೆ 10ರಿಂದ ಮಹಾಶಿವರಾತ್ರಿ ಹಾಗೂ ಶರಣ ಗಣ ಮೇಳ ಕಾರ್ಯಕ್ರಮವನ್ನು ಅಖಲ ಭಾರತ ಧರ್ಮ ಮಹಾಸಭಾ ಹಾಗೂ ರಾಷ್ಟ್ರೀಯ ಬಸವದಳದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.