ಧಾರವಾಡ: ಸಂಸ್ಮರಣೆ ಸಮಾರಂಭ
ಧಾರವಾಡ: ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಲೇಖಕಿ ಗೀತಾ ಕುಲಕರ್ಣಿಯವರು ಮಾನವೀಯ ಅನುಕಂಪದ ಜೊತೆಗೆ ಅಂತರಂಗದ ಭಾವನೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವ ಹೊಂದಿದ್ದರು ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೇಳಿದರು.
ಇಲ್ಲಿನ ವಿದ್ಯಾವರ್ಧಕ ಸಂಘದಲ್ಲಿ ನಡೆದ ಗೀತಾ ಕುಲಕರ್ಣಿ ಸಂಸ್ಮರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಧಾರವಾಡದ ಗೆಳೆಯರ ಗುಂಪಿಗಾಗಿ ಹಗಲಿರುಳು ಶ್ರಮಿಸಿದ ಕುಲಕರ್ಣಿಯವರು, ಗೆಳೆಯರ ಗುಂಪಿನ ದೊಡ್ಡವರ ಸಣ್ಣತನದಿಂದ ಸಂಕಷ್ಟ ಅನುಭವಿಸಬೇಕಾಯಿತು ಎಂದರು. ಡಾ. ಪಂಚಾಕ್ಷರಿ ಹಿರೇಮಠ ಮಾತನಾಡಿ, ಗೀತಾ ಬರಿ ಲೇಖಕಿ ಅಥವಾ ಕಥೆಗಾರ್ತಿಯಾಗಿರಲಿಲ್ಲ. ಅಪಾರ ಅಂತಃಕರಣದ, ಕೋಮಲ ಮನಸ್ಸಿನ ಚೇತನ ಶಕ್ತಿಯಾಗಿದ್ದರು. ಶ್ರದ್ಧೆ ಹಾಗೂ ಪ್ರೀತಿಯಿಂದ ಹಿಡಿದ ಕಾರ್ಯವನ್ನು ಅವರು ಸಾಧಿಸಿ ತೋರಿಸಬಲ್ಲ ಸಾಮರ್ಥ್ಯ ಉಳ್ಳವರಾಗಿದ್ದರು ಎಂದರು. ನಾಡೋಜ ಡಾ. ಚೆನ್ನವೀರ ಕಣವಿ, ಕವಿವಿ ಪ್ರಾಧ್ಯಾಪಕಿ ಡಾ. ಶಾಂತಾ ಇಮ್ರಾಪುರ, ಡಾ. ಶ್ಯಾಮಸುಂದರ ಬಿದರಕುಂದಿ ಮಾತನಾಡಿದರು. ಡಾ. ವೀಣಾ ಬನ್ನಂಜೆ, ಡಾ. ಶಿವಾನಂದ ಗಾಳಿ, ಡಾ. ಜಿನದತ್ತ ಹಡಗಲಿ, ರಂಜನಾ ನಾಯಕ, ಇಂದುಮತಿ ಪಾಟೀಲ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.