ರಾಜ್ಯಶಾಸ್ತ್ರ ವಿಭಾಗದಲ್ಲಿ ಉಪನ್ಯಾಸ
ಧಾರವಾಡ: ಕವಿವಿ ರಾಜ್ಯಶಾಸ್ತ್ರ ವಿಭಾಗದಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ ಎಚ್.ಎಂ. ರಾಜಶೇಖರ 'ಭಾರತ ರಾಜಕಾರಣದ ಮುಂದಿನ ಸವಾಲುಗಳು' ಕುರಿತು ಮಾತನಾಡಿದರು. ಪ್ರಾಧ್ಯಾಪಕ ಡಾ ಜಿ.ಸಿ. ಹಿರೇಗೌಡರ ಅಧ್ಯಕ್ಷತೆ ವಹಿಸಿದ್ದರು. ಎಂ.ಜಿ. ಖಾನ್, ಡಾ ಎಸ್.ಎಸ್. ಪಟಗುಂದಿ, ಡಾ ಹರೀಶ ರಾಮಸ್ವಾಮಿ ಹಾಗೂ ಡಾ ಎನ್.ಎಂ. ರತ್ನಾಕರ್ ಇದ್ದರು.
ಹೊಸಕೇರಿ ಜನ್ಮಶತಮಾನೋತ್ಸವ
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಹೊಸಕೇರಿ ನಾರಾಯಣಚಾರ್ಯ ಜನ್ಮಶತಮಾನೋತ್ಸ ಇಲ್ಲಿನ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಮಾ. 17ರಂದು ಸಂಜೆ 5. 30ಕ್ಕೆ ನಡೆಯಲಿದೆ. ನಾಡೋಜ ಡಾ ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಉಣಕಲ್ ಕೆರೆಗೆ ಚನ್ನಬಸವ ಸಾಗರ ಹೆಸರಿಡಿ
ಧಾರವಾಡ: ಐತಿಹಾಸಿಕ ಹಿನ್ನೆಲೆ ಹೊಂದಿದ ಉಣಕಲ್ ಕೆರೆಗೆ 'ಚನ್ನಬಸವ ಸಾಗರ' ಎಂದು ನಾಮಕರಣ ಮಾಡಲು ಪಾಲಿಕೆ ನೂತನ ಪ್ರತಿನಿಧಿಗಳು ಗಮನ ಹರಿಸಬೇಕೆಂದು ಇಲ್ಲಿನ ರಾಷ್ಟ್ರೀಯ ಬಸವದಳದ ಅಧ್ಯಕ್ಷ ಸಿದ್ದಣ್ಣ ನಟೇಗಲ್ ಹಾಗೂ ಯುವ ಘಟಕದ ಅಧ್ಯಕ್ಷ ಕೆ.ಎಸ್. ಕೋರಿಶೆಟ್ಟರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.