ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಚೆಕ್ ಬೌನ್ಸ್: ಇಬ್ಬರಿಗೆ ನ್ಯಾಯಾಂಗ ಬಂಧನ, ತನಿಖೆ

Parashurama
Updated On : 17 Mar 2013, 11:58 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 16
ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂಗ್ಲಿ ಮೂಲದ ಇಬ್ಬರನ್ನು ಇಲ್ಲಿನ ಜೆಎಂಎಫ್‌ಸಿ 2ನೇ ನ್ಯಾಯಾಲಯ ಮಾ. 30ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಶುಕ್ರವಾರ ಆದೇಶ ನೀಡಿದೆ.
ಸಾಂಗ್ಲಿಯಲ್ಲಿ ಭಾವನಾ ಎಂಟರ್‌ಪ್ರೈಸೆಸ್ ನಡೆಸುತ್ತಿದ್ದ ಪ್ರೇಮಾ ಪ್ರಕಾಶ ಮಾಲಪಾನಿ ಹಾಗೂ ಬ್ರೋಕರ್ ದಿನೇಶ ಮನಿಯಾರ್ ಎಂಬಿಬ್ಬರೇ ನ್ಯಾಯಾಂಗ ವಶಕ್ಕೆ ಒಳಪಟ್ಟವರಾಗಿದ್ದಾರೆ.
ಆರೋಪಿಗಳಿಬ್ಬರೂ ನಗರದ ತಿರುಪತಿ ಆಯಿಲ್ ಎಕ್ಸ್‌ಟ್ರ್ಯಾಕ್ಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಶೋಕ ಗೋಯಲ್ ಅವರಿಂದ ಕಾಟನ್ ಸೀಡ್ಸ್ ಆಯಿಲ್ ಫುಡ್ಸ್‌ನ್ನು ಖರೀದಿಸಿ ಅವರಿಗೆ ಸಂದಾಯ ಮಾಡಬೇಕಿದ್ದ ಒಟ್ಟು ರು. 9.5 ಲಕ್ಷಗಳ ಚೆಕ್ ನೀಡಿದ್ದರು.  ಆದರೆ, ಚೆಕ್ ಡ್ರಾ ಮಾಡಲು ಗೋಯಲ್ ಅವರು ಬ್ಯಾಂಕಿಗೆ ಹಾಕಿದಾಗ ಖಾತೆಯಲ್ಲಿ ಸಾಕಷ್ಟು ಹಣವಿಲ್ಲ ಎಂಬ ಕಾರಣದಿಂದ ಬೌನ್ಸ್ ಆಯಿತು. ಇದಾದ ನಂತರ, ಗೋಯಲ್ ಅವರು ಪ್ರೇಮಾ ಹಾಗೂ ದಿನೇಶ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪಿತರಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಬಾಡಿ ವಾರೆಂಟ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಶೋಕನಗರ ಠಾಣೆ ಪೊಲೀಸರು ಆರೋಪಿಗಳ ಇರುವಿಕೆಯನ್ನು ಪತ್ತೆ ಹಚ್ಚಿ ಶುಕ್ರವಾರ ಅವರನ್ನು ಬಂಧಿಸಿ ನಗರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತಂತೆ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?: ಬ್ರೋಕರ್ ದಿನೇಶ, ಪ್ರೇಮಾ ಮಾಲೀಕತ್ವದ ಭಾವನಾ ಎಂಟರ್‌ಪ್ರೈಸೆಸ್ ಹೆಸರಿನಲ್ಲಿ ಮಹಾನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಾಟನ್ ಸೀಡ್ಸ್ ಆಯಿಲ್ ಫುಡ್ಸ್ ಖರೀದಿಸುತ್ತಿದ್ದರು. ಅದರಂತೆಯೇ ಗೋಯಲ್ ಅವರಿಂದಲೂ ಉತ್ಪಾದನೆ ಖರೀದಿಸಿದ್ದ ಆರೋಪಿಗಳು ಅದಕ್ಕೆ ಸಂಬಂಧಿಸಿದಂತೆ ಆಯಾ ವ್ಯಾಪಾರಿಗಳಿಗೆ ಪಾವತಿಸಬೇಕಿದ್ದ ಹಣಕ್ಕಾಗಿ ಚೆಕ್ ನೀಡಿದ್ದರು.
ಗೋಯಲ್ ಅವರಿಗೆ ಪ್ರೇಮಾ ಅವರಿಂದ ರು. 6.5 ಲಕ್ಷ ಸಂದಾಯವಾಗಬೇಕಿದ್ದು, ಇದೇ ರೀತಿಯಾಗಿ ಮತ್ತೊಬ್ಬ ಆರೋಪಿ ದಿನೇಶ ಅವರಿಂದ ರು. 3 ಲಕ್ಷ  ಸಂದಾಯವಾಗಬೇಕಿದೆ. ರಾಜ್ಯಾದ್ಯಂತ ಒಟ್ಟು ರು. 1ರಿಂದ 1.5 ಕೋಟಿ ವರೆಗೆ ಇಬ್ಬರೂ ಆರೋಪಿಗಳು ವ್ಯಾಪಾರಿಗಳನ್ನು ವಂಚಿಸಿರುವ ಬಗ್ಗೆ ಪೊಲೀಸರು ಹಾಗೂ ಮಹಾನಗರದ ವ್ಯಾಪಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments