ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮನೆ ನಿರ್ಮಾಣಕ್ಕೆ ರು. 75 ಸಾವಿರ

Mainashree
Updated On : 19 Mar 2013, 10:45 am

ನವಲಗುಂದ: ಬಸವ ವಸತಿ ಯೋಜನೆಯ ಪ್ರತಿ ಮನೆ ನಿರ್ಮಾಣಕ್ಕೆ ರು. 75 ಸಾವಿರ ಸಹಾಯಧನ ನೀಡಲಾಗುವುದು. ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದರಿಂದ ಯಾವುದೇ ಭ್ರಷ್ಟಚಾರಕ್ಕೆ ಆಸ್ಪದ ಇಲ್ಲದಂತಾಗುತ್ತದೆ ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಅವರು ಸೋಮವಾರ ಜಿಪಂ, ತಾಪಂ, ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ಗ್ರಾಮ ಪಂಚಾಯ್ತಿಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಮಾರಾಟ ಮಳಿಗೆ, ಸಾಮರ್ಥ್ಯ ಸೌಧ ಉದ್ಘಾಟನೆ ಹಾಗೂ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಮನೆ ಹಂಚಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಗ್ರಾಮಗಳಿಂದ 1,738 ಫಲಾನುಭವಿಗಳನ್ನು ಆಯ್ಕೆ ಮಾಡಿ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರವನ್ನು ವಿತರಿಸಲಾಗುತ್ತಿದೆ. ಫಲಾನುಭವಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದಾಗಿ ಗುಡಿಸಲು ರಹಿತ ಗ್ರಾಮಗಳ ನಿರ್ಮಾಣದ ಕನಸು ನನಸಾಗಿದೆ ಎಂದರು. ಜಿಪಂ ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಜಿಪಂ ಸದಸ್ಯರಾದ ಅಡಿವೆಪ್ಪ ಮನಮಿ, ಶಾಂತಾ ನಿಡವಣಿ, ಸುರೇಶ ಗಾಣಿಗೇರ, ತಾಪಂ ಅಧ್ಯಕ್ಷ ಮಲ್ಲನಗೌಡ ರಾಟಿಮನಿ, ಉಪಾಧ್ಯಕ್ಷೆ ನೀಲವ್ವ ತಳವಾರ, ತಾಪಂ ಇಓ ಎಂ.ಎಂ. ಸವದತ್ತಿ, ಜಿಪಂ ಕಾರ್ಯನಿರ್ವಾಹಕ ಅಭಿಯಂತರ ಜಿ.ಡಿ. ಜೋಶಿ ಇತರರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಮಾಯಾಚಾರಿ ಸ್ವಾಗತಿಸಿದರು. ಎನ್.ಎನ್. ಹಾಲಗೇರಿ ನಿರೂಪಿಸಿದರು. ಎಸ್.ಎಸ್. ಸೌದಾಗರ ವಂದಿಸಿದರು.
ಮುರಿದು ಬಿದ್ದ ಪೆಂಡಾಲ್: ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಇಲ್ಲಿಯ ರಾಣಿ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಹಾಕಲಾಗಿದ್ದ ಪೆಂಡಾಲ್ ಕಾರ್ಯಕ್ರಮ ಪ್ರಾರಂಭವಾಗುವಷ್ಟರಲ್ಲಿ ಗಾಳಿಯ ಹೊಡೆತಕ್ಕೆ ಕುಸಿಯಿತು. ಇದರಿಂದಾಗಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇದರಿಂದಾಗಿ ಶ್ರೀ ನೀಲಕಂಠಶಾಸ್ತ್ರಿ ಕಲಾಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement