ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆಯಿಂದ ಜೆಎಸ್ಸೆಸ್‌ನಲ್ಲಿ ತಂತ್ರಜ್ಞಾನ ಮೇಳ

Mainashree
Updated On : 20 Mar 2013, 10:41 am

ಕನ್ನಡಪ್ರಭ ವಾರ್ತೆ, ಧಾರವಾಡ, ಮಾ. 19
ಇಲ್ಲಿನ ಜೆಎಸ್ಸೆಸ್ ಕಾಲೇಜಿನಲ್ಲಿ ಮಾ. 21 ಹಾಗೂ 22ರಂದು ಸಂಕಲ್ಪ ಹೆಸರಿನ ರಾಜ್ಯ ಮಟ್ಟದ ಮಾಹಿತಿ ತಂತ್ರಜ್ಞಾನ ಮೇಳ ಹಮ್ಮಿಕೊಳ್ಳಲಾಗಿದೆ. ಕಾಲೇಜಿನ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಮಾ. 21ರ ಬೆಳಗ್ಗೆ 10ಕ್ಕೆ ಮೇಳವನ್ನು ಸಂಸ್ಥೆಯ ಕಾರ್ಯದರ್ಶಿ ಡಾ. ನ. ವಜ್ರಕುಮಾರ ಉದ್ಘಾಟಿಸುತ್ತಾರೆ. ಅತಿಥಿಗಳಾಗಿ ಕವಿವಿ ಕುಲಪತಿ ಡಾ. ಎಚ್.ಬಿ. ವಾಲೀಕಾರ, ನ್ಯಾಯಾಧೀಶ ಸಿ. ರಾಜಶೇಖರ ಆಗಮಿಸಲಿದ್ದಾರೆ ಎಂದರು.
ಮೇಳದಲ್ಲಿ ಕಂಪ್ಯೂಟರ್ ಜ್ಞಾನ ಕುರಿತು ಏಳು ಪ್ರಕಾರದ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಚರ್ಚೆ, ರಸಪ್ರಶ್ನೆ ಸ್ಪರ್ಧೆ, ಸಾಫ್ಟವೇರ್, ಹಾರ್ಡ್‌ವೇರ್ ಸ್ಪರ್ಧೆಗಳು ಇರುತ್ತವೆ. 7 ಸ್ಪರ್ಧೆಗಳ ಪೈಕಿ 6 ಸ್ಪರ್ಧೆಗಳಲ್ಲಿ ವಿಜೇತವಾದ ತಂಡಕ್ಕೆ ಚಾಂಪಿಯನ್‌ಶಿಪ್ ನೀಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲಾಗುವುದು ಎಂದರು.
ರಾಜ್ಯದ ವಿವಿಧ ಜೆಲ್ಲೆಗಳಿಂದ 20 ಕಾಲೇಜಿನ 800 ವಿರ್ದ್ಯ್ಙಾಗಳು 2 ದಿನಗಳ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿರ್ದ್ಯ್ಙಾಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ನಡೆಯಲಿವೆ. ಮಾ. 22ರ ಸಂಜೆ 7ಕ್ಕೆ ಕಾಲೇಜಿನ ಆವರಣದಲ್ಲಿ ಸಮಾರೋಪ ನಡೆಯಲಿದೆ. ಸಂಸ್ಥೆಯ ವಾರ್ಷಿಕ ಸ್ನೇಹ ಸಮ್ಮೇಳನ ಮಾ. 23ರ ಮುಂಜಾನೆ 10.30ಕ್ಕೆ ನಡೆಯಲಿದೆ. ಅತಿಥಿಗಳಾಗಿ ಜಾನಪದ ಸಾಹಿತಿ ಡಾ. ಶಂಭು ಬಳಿಗಾರ ಆಗಮಿಸಲಿದ್ದಾರೆ. ಡಾ. ನ. ವಜ್ರಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಕಂಪ್ಯೂಟರ್ ವಿಭಾಗದ ಸೂರಜ್ ಜೈನ್, ವಿವೇಕ ಲಕ್ಷ್ಮೇಶ್ವರ, ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ, ದೈಹಿಕ ನಿರ್ದೇಶಕ ಜಿನ್ನಪ್ಪ ಕುಂದಗೋಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement