ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಪತ್ನಿ ಪೀಡಕ ಯೋಗಗುರುವಿನ ಬಂಧನ

Mainashree
Updated On : 20 Mar 2013, 10:41 am

ಹುಬ್ಬಳ್ಳಿ: ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ನಗರದ ಯೋಗಗುರುವೊಬ್ಬನನ್ನು ಮಹಿಳಾ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಮಂಜುನಾಥ ನಗರದ ಚೇತನಾ ಕಾಲನಿ ನಿವಾಸಿ, ಬೈಲಪ್ಪನವರ ನಗರದ ಧನ್ವಂತರಿ ಯೋಗ ಹಾಗೂ ಮಸಾಜ್ ಕೇಂದ್ರದ ಮಾಲೀಕ ಗಿರೀಶ ನಾರಾಯಣ ಕಬಾಡೆ ಎಂಬುವನೇ ಬಂಧಿತ. ಗಿರೀಶ ಕಬಾಡೆಯ ಪತ್ನಿ ಮೇಘಾ (ಆದಿತಿ) 22-02-2013ರಂದು ನೀಡಿದ ದೂರಿನ ಮೇರೆಗೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ನೀಲಮ್ಮ ಚಲವಾದಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
22-12-2011ರಂದು ಗಿರೀಶನೊಂದಿಗೆ ವಿವಾಹವಾಗಿದ್ದ ಮೇಫಾ, ಒಂದು ವರ್ಷಕ್ಕೂ ಹೆಚ್ಚು ಸಂಸಾರ ನಡೆಸಿದ್ದರು. ಪತಿಯ ವಿಕೃತ ಹೆಚ್ಚಾಗುತ್ತಲೇ ಸಾಗಿದ್ದರೂ ಸಹಿಸಿಕೊಂಡಿದ್ದಳು. ಕೆಲ ತಿಂಗಳುಗಳಿಂದ ಪಾನಮತ್ತನಾಗಿ ಆಗಮಿಸುತ್ತಿದ್ದ ಗಿರೀಶ ಪತ್ನಿಯನ್ನೂ ಸಾರಾಯಿ ಸೇವಿಸುವಂತೆ ಪೀಡಿಸುತ್ತಿದ್ದ ಎಂದು ಠಾಣೆಯಲ್ಲಿ ನೀಡಲಾಗಿರುವ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ಚಲವಾದಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಗಿರೀಶ, ಜಿಲ್ಲಾ ಸತ್ರ ನ್ಯಾಯಾಲಯದಿಂದ ಜಾಮೀನು ಪಡೆಯಲು ಯತ್ನಿಸಿದ್ದಾನಾದರೂ ಸಫಲನಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement