ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನಾಳೆ ಪೂರ್ವಭಾವಿ ಸಭೆ

Mainashree
Updated On : 21 Mar 2013, 11:53 am

ನವಲಗುಂದ: ರೇಣುಕಾಚಾರ್ಯರ ಜಯಂತ್ಯುತ್ಸವ ಆಚರಣೆ ನಿಮಿತ್ತ ಮಾ. 22ರಂದು 11ಕ್ಕೆ ಇಲ್ಲಿನ ಪಂಚಗೃಹ ಹಿರೇಮಠದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಜಂಗಮ ಸಮಾಜ ಬಾಂಧವರು, ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕೆಂದು ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ತಾಲೂಕು ಯುವ ಘಟಕದ ಅಧ್ಯಕ್ಷ ಚರಂತಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗೆ  9901487100ಗೆ ಸಂಪರ್ಕಿಸಿ.

23ಕ್ಕೆ ಪಂ. ಮನಸೂರ ಗಾಯನ ಸೀಡಿ ಬಿಡುಗಡೆ
ಹುಬ್ಬಳ್ಳಿ: ಆಕಾಶವಾಣಿ ಧ್ವನಿ ಮುದ್ರಣ ಭಂಡಾರದಿಂದ ಆಯ್ದ ಪಂ. ಮಲ್ಲಿಕಾರ್ಜುನ ಮನಸೂರ ಅವರ ಗಾಯನದ ಸಿ.ಡಿ. ಬಿಡುಗಡೆ ಸಮಾರಂಭ, ಶಾಸ್ತ್ರೀಯ ಗಾಯನ, ವಚನ ಸಂಗೀತ ಕಾರ್ಯಕ್ರಮ ಧಾರವಾಡದ ಸೃಜನಾ ರಂಗ ಮಂದಿರಲ್ಲಿ ಮಾ. 23ರಂದು ಸಂಜೆ 6ಕ್ಕೆ ನಡೆಯಲಿದೆ. ಪಂಡಿತ ಮಲ್ಲಿಕಾರ್ಜುನ ಮನಸೂರ ಅವರ 5 ಸಿಡಿಗಳು ಅಂದು ಬಿಡುಗಡೆಗೊಳ್ಳಲಿದೆ. ಆಕಾಶವಾಣಿ ಹಾಗೂ ದೂರದರ್ಶನ ಅಪರ ಮಹಾನಿರ್ದೇಶಕ ಜಿ. ಜಯಲಾಲ ಸಿಡಿ ಬಿಡುಗಡೆ ಮಾಡುವರು. ಪಂ. ರಾಜಶೇಖರ ಮನಸೂರು ಪಾಲ್ಗೊಳ್ಳುವರು. ಬಳಿಕ ವಿಶೇಷ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಎಂ. ವೆಂಕಟೇಶಕುಮಾರ ವಚನ ಸಂಗೀತ ನಡೆಸಿಕೊಡಲಿದ್ದಾರೆ. ವಾದಿರಾಜ ನಿಂಬರಗಿ ವಾಯಲಿನ್, ಉದಯರಾಜ ಕರ್ಪೂರ ತಬಲಾ, ಪಂಚಾಕ್ಷರಯ್ಯ ಹಿರೇಮಠ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಉಲ್ಲಾಸ ಕಶಾಳಕರ ಅವರಿಂದ ಶಾಸ್ತ್ರೀಯ ಗಾಯನ ನಡೆಯಲಿದ್ದು, ಸರೇಶ ತಳವಲಕರ ತಬಲಾ, ತನ್ಮಯ ದೇವಚಾಕೆ ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement