ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸೂರು ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

Mainashree
Updated On : 21 Mar 2013, 11:28 am

ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಘೋಷಣೆಗೆ ಮುನ್ನವೇ ಹು-ಧಾ ಅವಳಿ ನಗರದ ನಿವೇಶನ ರಹಿತರಿಗೆ ಸರ್ಕಾರ ಸೂರು ಕಲ್ಪಿಸಬೇಕು ಎಂದು ಆಗ್ರಹಿಸಿ ಬುಧವಾರ ರಾಣಿ ಚೆನ್ನಮ್ಮ ವೃತ್ತದಲ್ಲಿ ಹು-ಧಾ ನಿವೇಶನ ರಹಿತರು ರ್ಯಾಲಿ ಮಾಡಿ ಪ್ರತಿಭಟಿಸಿದರು.  ಮತ ಗಳಿಸಬೇಕು ವೋಟ್ ಬ್ಯಾಂಕ್ ಸೃಷ್ಟಿಸಿಕೊಳ್ಳಬೇಕು ಎಂಬ ಏಕೈಕ ಉದ್ದೇಶದಿಂದ ಸರ್ಕಾರ ಮತ್ತು ಸಿಎಂ ಶೆಟ್ಟರ್ ಅವರು ರು. 2 ಕೆಜಿ ಅಕ್ಕಿ ಸೇರಿದಂತೆ ಇನ್ನಿತರ ಭರವಸೆಗಳನ್ನು ಸರ್ಕಾರ ನೀಡುತ್ತಿದೆ.  ನಮ್ಮ ಊರಿನವರೇ ಆದ ಸಿಎಂ ಶೆಟ್ಟರ್ ಅವರು ಅವಳಿ ನಗರದ ನಿವೇಶನ ರಹಿತರಿಗೆ ಏನು ಮಾಡಿದ್ದಾರೆ ಎಂದು ಫಲಕ ಹಿಡಿದುಕೊಂಡು ದುರ್ಬಲರಿಗೆ ಸೂರು ನೀಡಿ ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ರಾಯನಾಳ ಗ್ರಾಮದಲ್ಲಿ ಸರ್ಕಾರಿ ಮಾಲೀಕತ್ವದ ಜಮೀನಿನಲ್ಲಿ ವಸತಿ ಯೋಜನೆ ಜಾರಿ ಮಾಡುವುದಕ್ಕೆ ಸೂಕ್ತವಾಗಿದೆ ಎಂದು ಈಗಾಗಲೇ ತಮ್ಮ ಗಮನಕ್ಕೆ ತಂದಿದ್ದರೂ ಈ ನಿಟ್ಟಿನಲ್ಲಿ ಸಿಎಂ ಶೆಟ್ಟರ್ ಅವರು ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಬಾಲಕಿ ಅಪಹರಣ
ಹುಬ್ಬಳ್ಳಿ: ಬಟ್ಟೆ ಕೊಡಿಸುವ ನೆಪವೊಡ್ಡಿ ಬಾಲಕಿಯೊಬ್ಬಳನ್ನು ಅಪಹರಿಸಿರುವ ಘಟನೆ ಅಮರಗೋಳದ ಚೌಡಿ ಓಣಿಯಲ್ಲಿ ನಡೆದಿದೆ. ಪೂಜಾ ಹುಣಶ್ಯಾಳ (12) ಎಂಬುವಳೇ ಅಪಹರಣಕ್ಕೊಳಗಾದ ಬಾಲಕಿ. ರೂಪಾದೇವಿ ಹಾಗೂ ಆಕೆಯ ಪತಿ ಪುಪ್ಪಭಾರತಿ ಎಂಬುವರೇ ಅಪಹರಣ ಮಾಡಿದ್ದಾರೆ ಎಂದು ದೂರಲಾಗಿದೆ. ಈ ಕುರಿತಂತೆ ಅಮರಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನದ ಸರ ಸೆಳೆದು ಪರಾರಿ
ಧಾರವಾಡ: ಉಪನಗರ ಠಾಣಾ ವ್ಯಾಪ್ತಿಯ ನಾರಾಯಣಪುರದಲ್ಲಿ ವಾಯು ವಿಹಾರಕ್ಕೆ ಹೊರಟಿದ್ದ ಮಹಿಳೆಯ ಕೊರಳಲ್ಲಿನ ಸುಮಾರು ರು. 85 ಸಾವಿರ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತರು ಕುಸುಮಾ ಶೆಟ್ಟಿ ಎಂಬುವರ ಕೊರಳಲ್ಲಿದ್ದ 25 ಗ್ರಾಂ ಚಿನ್ನದ ಸರ ಸೆಳೆದು ಪರಾರಿಯಾಗಿದ್ದಾರೆ. ಈ ಕುರಿತು ಉಪನಗರ ಠಾಣೆಗೆ ದೂರು ನೀಡಲಾಗಿದ್ದು, ಪಿಎಸ್‌ಐ ಎಸ್.ಎಫ್. ದೊಡ್ಡಮನಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಮಹಿಳೆ ಆತ್ಮಹತ್ಯೆ
ಹುಬ್ಬಳ್ಳಿ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಉಣಕಲ್ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಮ್ಯಾದಾರ ಓಣಿ ನಿವಾಸಿ ಪ್ರತಿಭಾ ರಾಜಾರಾಮ ಜಾಧವ (55) ಎಂಬುವಳೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವಿವಾಹಿತಳಾಗಿದ್ದ ಪ್ರತಿಭಾ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಇತ್ತೀಚಿಗಷ್ಟೇ ತನ್ನ ತಾಯಿಯೂ ತೀರಿ ಹೋಗಿದ್ದರಿಂದ ತೀವ್ರ ಮನನೊಂದು ಬುಧವಾರ ಬೆಳಗ್ಗೆ ಉಣಕಲ್ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಈ ಕುರಿತಂತೆ ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement