ಹಾನಿಗೀಡಾದ ರೈತನಿಗೆ ಸಹಾಯಧನ
ಕಲಘಟಗಿ: ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಬಣವೆಗೆ ಬೆಂಕಿ ಹತ್ತಿ ಹಾನಿಗೀಡಾದ ರೈತ ರಾಮಣ್ಣ ಚ. ಮುದೆಣ್ಣವರ ಕುಟುಂಬಕ್ಕೆ ಧಾರವಾಡ ಜಿಲ್ಲಾ ಬಿಜೆಪಿ ಧುರೀಣ ವೀರೇಶ ಸಾಲಗಾರ ರು. 10 ಸಾವಿರ ಸಹಾಯಧನ ನೀಡಿದರು. ಕಳೆದ 2 ದಿನಗಳ ಹಿಂದೆ ರೈತ ರಾಮಣ್ಣನ 4 ಎಕರೆ ಹೊಲದಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿಲಕ್ಷಾಂತರ ಮೌಲ್ಯದ ಹಾನಿಯುಂಟಾಗಿದೆ. ಬುಧವಾರ ಮುಂಜಾನೆ ಗ್ರಾಮಕ್ಕೆ ಭೇಟಿ ನೀಡದ ವೀರೇಶ ಸಾಲಗಾರ ಸಹಾಯಧನ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ವಿ.ಎಸ್. ನೂಲ್ವಿ, ತಾಲೂಕು ಕಿಸಾನ್ ಘಟಕದ ಅಧ್ಯಕ್ಷ ವೈ.ಎನ್. ಪಾಟೀಲ, ಸಿದ್ದನಗೌಡ ಪಾಟೀಲ, ತಾಪಂ ಮಾಜಿ ಉಪಾಧ್ಯಕ್ಷ ನೀಲಕಂಠಗೌಡ ಪಾಟೀಲ, ಬಸವರಾಜ ಶೆರೇವಾಡ, ಅಶೋಕ ಖಾಸಿಬಡಿಗೇರ, ನಿಂಗಪ್ಪ ಹೂಲಿ ಇದ್ದರು.