ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ದೇವೇಗೌಡ ಬಗ್ಗೆ ಸಿದ್ದರಾಮಯ್ಯ ಲಘು ಪ್ರತಿಕ್ರಿಯೆ: ಹೊರಟ್ಟಿ ಕಿಡಿ

Mainashree
Updated On : 22 Mar 2013, 10:36 am

ಹುಬ್ಬಳ್ಳಿ: ಕಾವೇರಿ ನದಿ ನೀರಿನ ಬಗೆಗಿನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕಾಳಜಿ ಕುರಿತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಲಘುವಾಗಿ ಪ್ರತಿಕ್ರಿಯೆ ನೀಡುವ ಮೂಲಕ ನದಿ ಪಾತ್ರದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ದೂರಿದ್ದಾರೆ. ಹಿರಿಯ ಅನುಭವಿ ನಾಯಕರ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ ಎಂದು ಬಸವರಾಜ ಹೊರಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಡಿನ ನೆಲ, ಜಲ ಹಾಗೂ ಭಾಷೆಯ ಬಗೆಗೆ ಯಾರೇ ಹೇಳಿಕೆ ನೀಡಿದರೂ ಅದನ್ನು ಬೆಂಬಲಿಸಬೇಕಾಗಿದ್ದು ನಮ್ಮ ಕರ್ತವ್ಯ. ಇಂಥದರಲ್ಲಿ ಕಾವೇರಿ ಬಗೆಗಿನ ದೇವೆಗೌಡರ ಕಾಳಜಿಯನ್ನು ಪ್ರತಿಪಕ್ಷ ನಾಯಕರು ಹಳದಿ ಕಣ್ಣಿನಿಂದ ನೋಡಿದ್ದು ಸೂಕ್ತವಲ್ಲ. ಎಚ್.ಡಿ. ದೇವೇಗೌಡ ಅವರು ಮಾಡುತ್ತಿರುವ ಕೆಲಸವನ್ನು ಆಡಳಿತ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ನವರು ಏಕೆ ಮಾಡುತ್ತಿಲ್ಲವೆಂದು ಕಾವೇರಿ ಕೊಳ್ಳದ ನಾಗರಿಕರು ಮತ್ತು ರೈತರು ಪ್ರಶ್ನಿಸುವಂತಾಗಿದೆ. ದೇವೇಗೌಡರು ಕೇವಲ 11 ತಿಂಗಳು ಪ್ರಧಾನಿಯಾಗಿದ್ದರು. ಇಷ್ಟು ಕನಿಷ್ಠ ಅವಧಿಯಲ್ಲಿ ಅಂತರ್ ರಾಜ್ಯ ನದಿ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವೇ ಎಂಬುದನ್ನು ಸಿದ್ಧರಾಮಯ್ಯ ತಮ್ಮ ಆತ್ಮ ಸಾಕ್ಷಿ ಮೂಲಕ ಹೇಳಲಿ. ಕೇವಲ ಟೀಕೆ ಮಾಡದೆ ಮಾಜಿ ಪ್ರಧಾನಿಗಳ ಹೋರಾಟಕ್ಕೆ ರಚನಾತ್ಮಕ ಬೆಂಬಲ ನೀಡುವ ಮೂಲಕ ಪ್ರತಿಪಕ್ಷ ರಾಜ್ಯದ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಹೊರಟ್ಟಿ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement