ಮಿಡ್ಮ್ಯಾಕ್ಗೆ ಚಾಂಪಿಯನ್ಷಿಪ್
ಹುಬ್ಬಳ್ಳಿ: ಹುಬ್ಬಳ್ಳಿಯ ರಾಜ್ ನಗರ ಕೆಎಸ್ಸಿಎ ಸ್ಟೇಡಿಯಂನಲ್ಲಿ ಈಚೆಗೆ ಜರುಗಿದ ಕೆಎಸ್ಸಿಎ ಬಿ ಡಿವಿಜನ್ ಕ್ರಿಕೆಟ್ ಚಾಂಪಿಯನ್ಷಿಪ್ನಲ್ಲಿ ಮಿಡ್ಮ್ಯಾಕ್ ಸ್ಪೋರ್ಟ್ಸ್ ಕ್ಲಬ್ ಜಯ ಸಾಧಿಸಿದೆ. ಒಟ್ಟು 9 ಪಂದ್ಯಗಳನ್ನು ಆಡಿದ ಮಿಡ್ಮ್ಯಾಕ್ ಸ್ಪೋರ್ಟ್ಸ್ ತಂಡವು 7 ಪಂದ್ಯಗಳಲ್ಲಿ ಗೆಲವು ಸಾಧಿಸಿ 35 ಅಂಕ ಮತ್ತು ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಂಡು 3 ಅಂಕಗಳಿಸಿ ಒಟ್ಟು 38 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ಷಿಪ್ ತನ್ನದಾಗಿಸಿಕೊಂಡಿತು. ಸಚಿನ್ ಜಿ, ಗುರುಪ್ರಸಾದ ಟಿ, ಮಹ್ಮದ ಶಾಬಾಜ್, ಸಂತೋಷ್ ಎಸ್.ಟಿ, ವಿಶ್ವನಾಥ ಸಿ, ಜಹೀರ್ ಅಹ್ಮದ್ಖಾನ್ (ಕೋಚ್), ತಬರೇಜ್ ಸಂಶಿ (ಉಪಾಧ್ಯಕ್ಷ) ಮತ್ತು ಮಹ್ಮದ್ ಇಸ್ಮಾಯಿಲ್ ಸಂಶಿ (ಅಧ್ಯಕ್ಷ) ಇದ್ದರು.