ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಾಧಕಿಯರಿಗೆ ಕೆಸಿಸಿಐ ಸನ್ಮಾನ

Mainashree
Updated On : 24 Mar 2013, 11:13 am

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಇಲ್ಲಿನ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಹಮ್ಮಿಕೊಂಡಿದ್ದ ಯಶಸ್ವಿ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 12 ಮಹಿಳಾ ಉದ್ಯಮಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶಶಿಕಲಾ ಪ್ರೇಮಾನಂದ ನಾಯಿಕ: ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಶಶಿಕಲಾ ಅವರು 20 ಮಹಿಳೆಯರಿಗೆ ಉದ್ಯೋಗ ನೀಡುವುದರ ಜೊತೆಗೆ ಸ್ವತಂತ್ರವಾಗಿ ಉದ್ದಿಮೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ರೇಣುಕಾ ಹಂದ್ರಾಳ: ಗದಗ ಜಿಲ್ಲೆಯ ಮುಂಡಗಿಯವರಾದ ರೇಣುಕಾ ಅವರು ಯಶಸ್ವಿಯಾಗಿ ಉದ್ದಿಮೆಯನ್ನು ನಡೆಸಿಕೊಂಡು ಹೋಗುತ್ತಿರುವುದು ಅಲ್ಲದೇ 8 ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ.
ಮಹಾಲಕ್ಷ್ಮಿ ಕೆಸರಹಟ್ಟಿ: ಎಂಬಿಎ ಪದವಿಧರೆಯಾಗಿರುವ ಗಂಗಾವತಿಯ ಮಹಾಲಕ್ಷ್ಮಿ ಅವರು 1 ಸಾವಿರ ಸ್ತ್ರೀ ಶಕ್ತಿ ಸಂಘಗಳಿಗೆ ಬ್ಯಾಂಕ್ ಮುಖಾಂತರ ಸಾಲ ಸೌಲಭ್ಯ ಕಲ್ಪಿಸಿದ್ದಾರೆ. ಇದರ ಜೊತೆಗೆ ಗ್ರಾಮೀಣ ಭಾಗದ ಜನರಲ್ಲಿ ಶೌಚಾಲಯದ ಕುರಿತು ಜಾಗೃತಿ ಮೂಡಿಸಿದ್ದಾರೆ.
ಸುಮನಾ ಬಲರಾಮ್: ದಾವಣಗೆರೆಯವರಾದ ಸುಮನಾ ಅವರು ಪ್ರತಿ ವರ್ಷ ರು. 4 ಲಕ್ಷ ವಹಿವಾಟು ಮಾಡುವ ಉದ್ದಿಮೆ ನಡೆಸಿಕೊಂಡು ಬರುತ್ತಿದ್ದು, 8 ಮಹಿಳೆಯರಿಗೆ ತಮ್ಮ ಸಂಸ್ಥೆಯಲ್ಲಿ ಉದ್ಯೋಗ ನೀಡಿದ್ದಾರೆ.
ಯಶೋದಾ ಗುಜ್ಜರ: ಬಿಜಾಪುರದ ಯಶೋದಾ ಅವರು ಸೀರೆಯ ಸೆರಗುಗಳಿಗೆ ಕುಸುರಿ ಕಲೆ ಬಿಡಿಸುವ ಕೆಲಸದಲ್ಲಿ ನೈಪುಣ್ಯತೆ ಸಾಧಿಸಿ, ಇದೀಗ 80ಕ್ಕೂ ಹೆಚ್ಚು ಮಹಿಳೆಯರಿಗೆ ನೇರ ಇಲ್ಲವೆ ಪರೋಕ್ಷವಾಗಿ ಉದ್ಯೋಗ ನೀಡಿದ್ದಾರೆ. ಇವರ ವ್ಯವಹಾರದ ವಾರ್ಷಿಕ ವಹಿವಾಟು ಪ್ರತಿವರ್ಷ ರು. 10 ಲಕ್ಷ.  ಸುಲೋಚನಾ ಪೋತದಾರ: ಧಾರವಾಡ ಔದ್ಯಮಿಕ ವಸಾಹಿತಿನಲ್ಲಿ ಸಿದ್ಧ ಉಡುಪು ತಯಾರಿಕಾ ಘಟಕವನ್ನು ಹೊಂದಿರುವ ಇವರು ತಮ್ಮ ಸಂಸ್ಥೆಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವಕಾಶ ಕಲ್ಪಿಸಿಕೊಟ್ಟಿದ್ದಾರೆ.
ವಿದ್ಯಾ ಶೆಟ್ಟಿ: ಹಾವೇರಿ ಜಿಲ್ಲೆಯ ಬ್ಯಾಡಗಿಯ ವಿದ್ಯಾ ಶೆಟ್ಟಿ ಅವರು ಗ್ರಾಮೀಣಾಭಿವೃದ್ಧಿಯಲ್ಲಿ ಡಿಪ್ಲೋಮಾ ಮಾಡಿ 20 ಜನರಿಗೆ ಉದ್ಯೋಗ ಕಲ್ಪಿಸಿರುವ ಉದ್ದಿಮೆ ನಡೆಸುತ್ತಿದ್ದಾರೆ ಇವರ ಉದ್ದಿಮೆಯ ವಾರ್ಷಿಕ ವಹಿವಾಟು ರು. 70 ಲಕ್ಷ.
ಮಹೇಜಾಬೀನ್ ಶೇಖ್:  ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಹೂವಿನ ಹಿತ್ತಲ ಎಂಬ ಕುಗ್ರಾಮದಲ್ಲಿ ಗೇರು ಸಂಸ್ಕರಣಾ ಘಟಕ ಸ್ಥಾಪಿಸಿ 50 ಮಹಿಳೆಯರಿಗೆ ಉದ್ಯೋಗವಕಾಶ ನೀಡಿರುವ ಸಾಧನೆ ಇವರದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement