ಉಚಿತ ಯೋಗ ಶಿಬಿರ
ಧಾರವಾಡ: ದಿಶಾ ಯೋಗ ಸಂಸ್ಥೆ ವತಿಯಿಂದ ಮಧುಮೇಹ ಕಾಯಿಲೆಗೆ ಉಚಿತ ಯೋಗ ತರಬೇತಿ ಹಾಗೂ ಚಿಕಿತ್ಸೆಯು ಆರಂಭವಾಗಿದ್ದು, ಏ. 7ರವರೆಗೆ ಇಲ್ಲಿನ ಜಯನಗರದ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ ಬೆಳಗ್ಗೆ 6ರಿಂದ 7ರವರೆಗೆ ಮಹಿಳೆಯರಿಗೆ ಮತ್ತು 7ರಿಂದ 8ರವರೆಗೆ ಪುರುಷರಿಗೆ ಯೋಗ ತರಬೇತಿ ನೀಡಲಾಗುತ್ತದೆ. ಆಸಕ್ತರು ಮಾ. 22ರೊಳಗೆ ಹೆಸರು ನೊಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ- 8884349867ನ್ನು ಸಂಪರ್ಕಿಸಬಹುದು.
ವೈದ್ಯೆ ಜ್ಯೋತಿಗೆ ಸನ್ಮಾನ
ಧಾರವಾಡ: ಇಲ್ಲಿನ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪ್ರಶಾಂತಿ ಧರ್ಮೋತ್ಸವದಲ್ಲಿ ಖ್ಯಾತ ವೈದ್ಯ ಡಾ. ಜ್ಯೋತಿ ಪಾಲಾಕ್ಷಿ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಚೀಲೂರಪ್ಪ. ಚೆನ್ನಪ್ಪ ಗೌಡರ, ಬಿ.ಇ. ನಾವಳ್ಳಿ, ಎಚ್.ಎಸ್. ಸೋಮನಗೌಡರ, ಪ್ರೇಮಾ ಸೋಮನಗೌಡರ, ಗೋಪಾಲ ಆಚಾರ್ಯ, ವಿ.ಟಿ. ತಾರಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.
ಬಸವಂತಪ್ಪ ಬಡಿಗೇರ ನಿಧನ
ಕಲಘಟಗಿ: ತಾಲೂಕಿನ ತುಮರಿಕೊಪ್ಪ ಗ್ರಾಮದ ಬಸವಂತಪ್ಪ ಗುರುಸಿದ್ದಪ್ಪ ಬಡಿಗೇರ (53) ಭಾನುವಾರ ಬೆಳಗ್ಗೆ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಇಬ್ಬರು ಪುತ್ರರು, ಬಂಧುಗಳು ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.