ಇಂದು ತರಬೇತಿ ಶಿಬಿರ (ಸುದ್ದಿ ಸಂಕ್ಷೇಪ)
ಧಾರವಾಡ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ಯಾನಲ್ ಅಂಪೈಯರ್, ಹುಬ್ಬಳ್ಳಿ ಹುಡುಗ ಅಭಿಜಿತ ಬೆಂಗೇರಿ, ಸ್ಥಳೀಯ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ (ಸಿಸಿಕೆ) ಆಶ್ರಯದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ(ವಿಎಂಸಿಎ) 28ನೇ ವಾರ್ಷಿಕ ತರಬೇತಿ ಶಿಬಿರ ರವಿವಾರ ಉದ್ಘಾಟಿಸಲಿದ್ದಾರೆ. ಸಿಸಿಕೆ ಅಧ್ಯಕ್ಷ ಪಿ.ಎಚ್. ನೀರಲಕೇರಿ, ಮಾಳಮಡ್ಡಿಯ ಕೆ.ಇ. ಬೋರ್ಡ್ಸ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಪಾಲಿಕೆ ಸದಸ್ಯ ಶಿವು ಹಿರೇಮಠ, ರಾಜ್ಯ ಕಿರಿಯರ ತಂಡದ ಆಟಗಾರ ಪವನ ದೇಶಪಾಂಡೆ, ಹಿರಿಯ ತರಬೇತುದಾರರಾದ ವಸಂತ ಮುರ್ಡೇಶ್ವರ, ಪ್ರಭಾಕರ ಕಾಗಲಕರ ಹಾಗೂ ಶಿವಪ್ರಕಾಶ ಶಿರಕೋಳ ಉಪಸ್ಥಿತರಿರಲಿದ್ದಾರೆ.