ಪೂರ್ವಭಾವಿ ಸಮಾಲೋಚನೆ ಸಭೆ
ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘ ಮಾ. 31ರಂದು ಬೆಳಿಗ್ಗೆ 10ಕ್ಕೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಹಮ್ಮಿಕೊಂಡ ಪೂಜ್ಯ ಶ್ರೀ ಮೃತ್ಯುಂಜಯಪ್ಪಗಳ ಕನ್ನಡ ಸಂಶೋಧನಾ ಕೇಂದ್ರ ಹಾಗೂ ಡಾ.ಬಿ.ಎಂ. ಪಾಟೀಲ ಸಭಾಭವನ ಉದ್ಘಾಟನಾ ಸಮಾರಂಭದ ಯಶಸ್ವಿಗಾಗಿ ಪೂರ್ವಭಾವಿ ಸಮಾಲೋಚನಾ ಸಭೆ ಶುಕ್ರವಾರ ಕರೆಯಲಾಗಿತ್ತು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಿ.ಎಸ್. ಪಾಟೀಲ, ಅಶೋಕ ನಿಡವಣಿ, ಶಿವಶರಣ ಕಲಬಶೆಟ್ಟರ, ಪಾರ್ವತಿ ಹಾಲಭಾವಿ, ಸತೀಶ ತುರಮರಿ, ಜಿ. ಬಿ. ಕೋಟೂರ, ಎಂ.ಬಿ. ಸಾಧನಿ, ವ್ಹಿ.ಎಸ್. ಪತ್ರಿಮಠ, ಬಿ.ಎಂ. ಹೂಗಾರ ಹಾಗೂ ಸಂಘದ ಸಹಕಾರ್ಯದರ್ಶಿ ಶಿವಾನಂದ ಭಾವಿಕಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ನಾಗಮ್ಮನವರ, ಬಸವಪ್ರಭು ಹೊಸಕೇರಿ, ವಿಶ್ವೇಶ್ವರಿ ಬ. ಹಿರೇಮಠ, ಪ್ರಕಾಶ ಉಡಿಕೇರಿ ಇದ್ದರು.