ಇಂದು ನವಲಗುಂದಕ್ಕೆ ಸಿಎಂ ಜಗದೀಶ ಶೆಟ್ಟರ್
ನವಲಗುಂದ: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ನವಲಗುಂದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಂಕರ ಪಾಟೀಲ ಮುನೇನಕೊಪ್ಪ ಅವರ ಚುನಾವಣಾ ಪ್ರಚಾರ ಭಾಷಣ ಮಾಡಲು ಮೇ 2ರಂದು ನವಲಗುಂದಕ್ಕೆ ಆಗಮಿಸಲಿದ್ದಾರೆ. ಪಕ್ಷದ ಕಚೇರಿಯ ಆವರಣದಲ್ಲಿ ಅಂದು ಬೆಳಗ್ಗೆ 11ಕ್ಕೆ ಏರ್ಪಡಿಸುವ ಸಭೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಎಸ್.ಬಿ. ದಾನಪ್ಪಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವೀಪ್ ಸಮಿತಿಫೇಸ್‌ಬುಕ್ ಖಾತೆ
ಧಾರವಾಡ: ಮತದಾರರಲ್ಲಿ ಜಾಗೃತಿಮೂಡಿಸಲು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ಜಿಲ್ಲಾ ಸ್ವೀಪ್ ಸಮಿತಿ ಈಗ ಸಾರ್ವಜನಿಕ ಮಾಹಿತಿ, ಸಂವಾದ ಹಾಗೂ ಸಂಪರ್ಕಕ್ಕಾಗಿ ಫೇಸ್‌ಬುಕ್ ಖಾತೆ ಆರಂಭಿಸಿದೆ. ಡಢಜಜಠಝಛ್ಠಢಿಛಜ ಹೆಸರಿನ ಖಾತೆಗೆ ಆಸಕ್ತ ಯುವಜನತೆ, ಸಾರ್ವಜನಿಕರು ಬೇಡಿಕೆ ಕಳುಹಿಸಿ ಸಂಪರ್ಕ ಸಾಧಿಸಿ ವಿಧಾನಸಭಾ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವ ಕುರಿತು, ಚಟುವಟಿಕೆಬಗ್ಗೆ ಮಾಹಿತಿ, ವಿವರ ಹಂಚಿಕೊಳ್ಳಬಹುದು. ಸಂವಾದವನ್ನೂ ನಡೆಸಬಹುದು ಎಂದು ಧಾರವಾಡ ಜಿಲ್ಲಾ ಸ್ವೀಪ್ ಸಮಿತಿ ತಿಳಿಸಿದೆ.
ಕಾರ್ ಪಲ್ಟಿ: ಸಾವು
ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಸಂಭವಿಸಿದ ಅಫಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಗದಗ ರಸ್ತೆಯ ಒಂಟಿ ಹನುಮಪ್ಪನ ದೇವಸ್ಥಾನದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ. ನಿಪ್ಪಾಣಿ ಮೂಲದ ರೇಣುಕಾಬಾಯಿ ಗುಡಿಮನಿ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ದ್ರಾಕ್ಷಾಯಿಣಿ, ಅಂಜಲಿ ಗಂಭೀರ ಗಾಯಗೊಂಡಿದ್ದು ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕಾರು ಚಾಲಕ ಅತಿ ವೇಗವಾಗಿ ಮುಂದೆ ಹೊರಟಿದ್ದ ವಾಹನ ಓವರ್‌ಟೆಕ್ ಮಾಡಲು ಯತ್ನಿಸಿದಾಗ, ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸುದ್ದಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಪಶ್ಚಿಮ ಸಂಚಾರಿ ಪೊಲೀಸರು ತೆರಳಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಿದರು. ಅಲ್ಲದೆ, ಮೃತ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್‌ನ ಶವಾಗಾರಕ್ಕೆ ಸಾಗಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಾಗಿದೆ.
ಶಾಂತಾದೇವಿ ನಿಧನ
ಧಾರವಾಡ: ಹೊಸಯಲ್ಲಾಪುರ ಹಿರೇಮಠ ಓಣಿ ನಿವಾಸಿ ಶಾಂತಾದೇವಿ (ಚಂಬಮ್ಮ) ಮುರುಗಯ್ಯ ಹಿರೇಮಠ (85) ಬುಧವಾರ ನಿಧನರಾಗಿದ್ದಾರೆ. ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.