ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಐಟಿ ಅಧಿಕಾರಿಗಳ ಹಠಾತ್ ದಾಳಿ

Mainashree
Updated On : 2 May 2013, 12:46 pm

ಹುಬ್ಬಳ್ಳಿ: ಮಹಾನಗರದ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿಯನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯ ಹಂಸ ಹೊಟೇಲ್ ಹಿಂಭಾಗದಲ್ಲಿ ಡಾ.ಎಸ್.ಎಸ್. ಹಿರೇಮಠ ಮನೆ , ಕಚೇರಿಗಳ ಮೇಲೆ ಒಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಇನ್ನೊಂದು ತಂಡ ಅಮೃತ ಟಾಕೀಸ್ ಹಿಂದೆ ಇರುವ ಅಶೋಕ ಪಾಟೀಲ್ ಎನ್ನುವ ಗುತ್ತಿಗೆದಾರರ ಮನೆ ಮತ್ತು ಆಫೀಸ್‌ಗಳನ್ನು ಆದಾಯ, ಸ್ತಿರಾಸ್ಥಿ ಮತ್ತು ಚರಾಸ್ತಿಗೆ ಸೇರಿದಂತೆ ಮತ್ತಿತರ ದಾಖಲೆಗಳನ್ನು ಪರಿಶೀಲಿಸಿದೆ.ಕೆಲವು ದಿನಗಳ ಹಿಂದೆಯಷ್ಟೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದ ಕೇಶ್ವಾಪುರದ ಕಾಡಯ್ಯ ಹಿರೇಮಠ ಅವರ ಮನೆ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement