ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಕೆ.ಸಿ. ಪಾರ್ಕ್‌ನಲ್ಲಿ ಸೈನಿಕ ಮೂರ್ತಿ

Vishwanath S
Updated On : 5 May 2013, 11:49 am

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 4
ಇಲ್ಲಿನ ಕಿತ್ತೂರು ಚೆನ್ನಮ್ಮ ಉದ್ಯಾನವನದಲ್ಲಿ ಇತ್ತೀಚೆಗೆ ಸೈನಿಕ ಮೂರ್ತಿಯನ್ನು ಸ್ಥಾಪಿಸಿದ್ದು, ಉದ್ಯಾನವನಕ್ಕೆ ಕಳೆ ಬಂದಂತಾಗಿದೆ.
ಧಾರವಾಡದ ಸಶ್ರೀ ಕುಮಾಂವು ಪ್ರತಿಷ್ಠಾನ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರ ಅನುಮತಿ ಪಡೆದು ಈ ಮೂರ್ತಿ ಸ್ಥಾಪನೆ ಕೈಗೊಂಡಿದ್ದು, ಸಾಮಾನ್ಯ ನಾಗರಿಕನೋರ್ವ ಸೈನಿಕನಿಗೆ ಪದಕವಿತ್ತು ಗೌರವಿಸುವ ದೊಡ್ಡ ಆಕಾರದಲ್ಲಿ ಈ ಮೂರ್ತಿ ಸ್ಥಾಪಿಸಲಾಗಿದೆ.
ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿರುವ ಸಶ್ರೀ ಕುಮಾಂವು ಪ್ರತಿಷ್ಠಾನದ ಮುಖ್ಯಸ್ಥಲೆ. ಜನರಲ್ ಎಸ್.ಸಿ. ಸರದೇಶಪಾಂಡೆ, ಕಳೆದ ವರ್ಷ ಆರಂಭವಾದ ಈ ಪ್ರತಿಷ್ಠಾನ ಜನತೆಯಲ್ಲಿ ಸೈನ್ಯ, ಸೈನಿಕ ಮತ್ತು ರಕ್ಷಣಾ ವ್ಯವಸ್ಥೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಸಭೆ-ಸಮಾರಂಭಗಳ ಜತೆಗೆ ಈ ಮೂರ್ತಿ ಸ್ಥಾಪನೆ ಸಹ ಸಾಧನೆಯೇ ಸರಿ. ಈ ಮೂರ್ತಿಯನ್ನು ಕಲಾವಿದರಾದ ಎನ್.ಎಂ. ದಾಟನಾಳ, ಕಾಮಕರ, ಕಂಕಣವಾಡಿ ನಿರ್ಮಿಸಿದ್ದಾರೆ.
ಇದೇ ಕಿತ್ತೂರು ಚೆನ್ನಮ್ಮ ಉದ್ಯಾನವನದಲ್ಲಿ ಆಧುನಿಕ ಮಹಿಳಾ ಸೇನಾಧಿಕಾರಿಯ ಪ್ರತಿಮೆಯೊಂದನ್ನು ಸ್ಥಾಪಿಸಬೇಕಿದೆ. ಚೆನ್ನಮ್ಮನ ಧೈರ್ಯ, ಸಾಹಸಕ್ಕೆ ಇದು ಪೂರಕವೂ ಹೌದು. ನಮ್ಮ ಸೈನಿಕನಿಗೆ ಪ್ರತಿಷ್ಠಾನವಿತ್ತ ಸೇವೆಯೂ ಹೌದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement