ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರೈಲಿಗೆ ಟಿಪ್ಪು ಸುಲ್ತಾನ್ ಎಕ್ಸ್‌ಪ್ರೆಸ್ ಹೆಸರಿಡಿ

Vishwanath S
Updated On : 5 May 2013, 11:48 am

ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 4
ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಹುಲಿ ಎಂದೇ ಪ್ರಸಿದ್ಧಿ ಪಡೆದ ಹಜರತ್ ಟಿಪ್ಪು ಸುಲ್ತಾನರ ಹುತಾತ್ಮ ದಿನವನ್ನು ಇಲ್ಲಿನ ಟಿಪ್ಪು ಸುಲ್ತಾನ ಆರ್ಟ್ ಆಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ಶನಿವಾರ ಹಜರತ್ ಟಿಪ್ಪು ಸುಲ್ತಾನ ವೃತ್ತದಲ್ಲಿ ಆಚರಿಸಲಾಯಿತು.
ಟಿಪ್ಪು ಸುಲ್ತಾನ್ ವರ್ತುಳಕ್ಕೆ ಟ್ರಸ್ಟ್‌ನ ಪದಾಧಿಕಾರಿಗಳು ಮಾಲಾರ್ಪಣೆ ಮಾಡಿದರು. ಅನಂತರ ಟ್ರಸ್ಟ್ ಅಧ್ಯಕ್ಷ ಇರ್ಷಾದ್ ಅಹಮ್ಮದ ಬಿಸ್ತಿ ಮಾತನಾಡಿ, ಪರಮ ದೇಶಭಕ್ತ ರಾಷ್ಟ್ರವೀರ ಟಿಪ್ಪು ಸುಲ್ತಾನರು ಇಲಿಯಾಗಿ ನೂರು ವರ್ಷ ಬಾಳುವುದಕ್ಕಿಂತ ಹುಲಿಯಾಗಿ ಒಂದೇ ದಿನ ಬಾಳುವುದೇ ಲೇಸು ಎಂಬ ತತ್ವ ಮತ್ತು ದೇಶ ಭಕ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಯುದ್ಧ ಭೂಮಿಯಲ್ಲಿ ಹೋರಾಡುತ್ತಲೇ ವೀರ ಮರಣ ಹೊಂದಿದರು. ಇಂತಹ ವೀರ ಕನ್ನಡಿಗ, ದೇಶ ಭಕ್ತಿಯ ಕಿಚ್ಚನ್ನು ಪ್ರತಿಯೊಬ್ಬರಲ್ಲಿ ಬಡಿದೆಬ್ಬಿಸಿದ ಟಿಪ್ಪು ಸುಲ್ತಾನರನ್ನು ಕೆಲವು ಜಾತಿವಾದಿಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಹಾಪುರುಷರ ಜಯಂತಿಯಂತೆ ಪ್ರತಿ ವರ್ಷ ನ. 20 ರಂದು ಟಿಪ್ಪು ಸುಲ್ತಾನರ ಜಯಂತಿಯನ್ನು ರಾಜ್ಯ ಸರ್ಕಾರವೇ ಆಚರಿಸಬೇಕು ಹಾಗೂ ಟೀಪುಸುಲ್ತಾನರ ಸ್ಮರಣಾರ್ಥ ಸಾರ್ವತ್ರಿಕ ರಜೆ ಘೋಷಿಸಬೇಕು. ಧಾರವಾಡದಿಂದ ದಿನನಿತ್ಯ ಸಂಚರಿಸುವ ರೈಲಿಗೆ ಹಜರತ್ ಟಿಪ್ಪು ಸುಲ್ತಾನ್ ಎಕ್ಸ್‌ಪ್ರೆಸ್ ಎಂದು ಹೆಸರು ಇಡಬೇಕು. ಮುಂಬರುವ ದಿನಗಳಲ್ಲಿ ಸರ್ಕಾರ ಈ ಕುರಿತು ಗಂಭೀರ ಚಿಂತನೆ ನಡೆಸಿ ಟಿಪ್ಪು ಸುಲ್ತಾನರನ್ನು ಯಾವುದೇ ಜಾತಿ ಪಂಗಡಕ್ಕೆ ಸೀಮಿತಗೊಳಿಸದೆ ಸರ್ವ ಸಮುದಾಯದವರು ಒಟ್ಟಾಗಿ ಅವರ ಜಯಂತಿ ಆಚರಿಸುವಂತಾಗಬೇಕು ಎಂದು ಮನವಿ ಮಾಡಿದರು.
ಟ್ರಸ್ಟ್‌ನ ಉಪಾಧ್ಯಕ್ಷ ಮಹ್ಮದ ಇಸಾಕ್ ನಾಲಬಂದ, ಜೈಲಾನಿ ಬಿಸ್ತಿ, ಖಜಾಂಚಿ ಶುಕೂರಅಹ್ಮದ ಸುರಣಗಿ, ಅತ್ತಾಉಲ್ಲಾ ಮನ್ನಾನಾಯಕ ಜನಾಬ ಸೌಧಾಗರ, ಗೌಸ ಮಕಾಂದರ, ರಹೀಮಸಾಬ ಖಾದ್ರೀ, ರಾಕೇಶ ಹೊಂಗಲ, ಪ್ರಕಾಶ, ಪ್ರದೀಪ ಕಲ್ಯಾಣಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement