ಅಣ್ಣಿಗೇರಿಯಲ್ಲಿ ಶಾಂತಿಯುತ ಮತದಾನ
ಅಣ್ಣಿಗೇರಿ: ನವಲಗುಂದ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮತದಾನ ಪಟ್ಟಣದಲ್ಲಿ ಶೇ.74.21ರಷ್ಟು ಆಗಿದೆ. ಬೆಳಗ್ಗೆಯಿಂದ ಸಂಜೆ 6ರ ವರೆಗೆ ನಡೆದ ಮತದಾನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮತದಾರರು 21 ಮತಗಟ್ಟೆಗಳಲ್ಲಿ ಸರದಿಯಲ್ಲಿ ನಿಂತು ಮತಚಲಾಯಿಸಿದರು. ಚುನಾವಣೆ ಅಧಿಕಾರಿಗಳು ಪ್ರತಿ ಮತಗಟ್ಟೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಪಕ್ಷದ ಕಾರ್ಯಕರ್ತರು ತಂಟೆ ತಕರಾರು ಮಾಡಿಲ್ಲ.