ಜೀವನ ಬದಲಿಸಿದ ಸಾಹಿತ್ಯ ಚರ್ಚೆ: ಡಾ. ತಾವರಗೇರಿ
ಧಾರವಾಡ: ವಿದ್ಯಾವರ್ಧಕ ಸಂಘದ ಗ್ರಂಥಾಲಯದಲ್ಲಿ ಓದುವ ಹವ್ಯಾಸ, ಗುಡಾರದ ಮೇಲೆ ಕುಳಿತು ಶಾಸ್ತ್ರೀಯ ಸಂಗೀತ ಕೇಳುವ ಹಾಗೂ ಹಿರಿಯ ಸಾಹಿತಿಗಳೊಂದಿಗೆ ಚರ್ಚಿಸುವ ಹುಚ್ಚನ್ನು ಹಚ್ಚಿಕೊಂಡು ನನ್ನ ಜೀವನವನ್ನೇ ಬದಲಿಸಿಕೊಂಡೆ ಎಂದು ಡಾ. ಮದನಮೋಹನ್ ತಾವರಗೇರಿ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಹಿಳಾ ಮಂಟಪ ಏರ್ಪಡಿಸಿದ್ದ ಸಾಧನೆಯ ಹಿಂದಿನ ಸ್ತ್ರೀಶಕ್ತಿ ಅಭಿನಂದನಾ ಮಾಲಿಕೆ-2ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣ ದೇಶಪಾಂಡೆಯವರ ಕಾರ್ಯಾಧ್ಯಕ್ಷರ ಅವಧಿಯಲ್ಲಿ ತಾವು ಖಜಾಂಚಿಯಾಗಿ ಕೂಡ ಕಾರ್ಯನಿರ್ವಹಿಸಿದ್ದೇನೆ. ತಂದೆಯವರ ಮಾರ್ಗದರ್ಶನ ಆದರ್ಶ ಜೀವನ ಶೈಲಿ ತಮ್ಮ ಬದುಕನ್ನು ರೂಪಿಸಿದೆ ಎಂದರು.
ಡಾ. ಕುಮುದ ತಾವರಗೇರಿ ಮಾತನಾಡಿ,ಡಾ. ಸಂಜೀವ ಕುಲಕರ್ಣಿ ಮಾತನಾಡಿದರು. ಡಾ.ಆರ್.ಎನ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಕೆ. ಕಾಳೆ, ಮೋಹನ ನಾಗಮ್ಮನವರ ಇದ್ದರು. ವಿಶ್ವೇಶ್ವರಿ ಬ. ಹಿರೇಮಠ ಸ್ವಾಗತಿಸಿದರು. ಶಾರದಾ ಕೌದಿ ನಿರೂಪಿಸಿದರು. ನಳಿನಾಕ್ಷಿ ಅರಳಗುಪ್ಪಿ ಹಾಗೂ ಶಶಿಕಲಾ ಶಾಸ್ತ್ರಿಮಠ ಪರಿಚಯಿಸಿದರು. ಬಳಿಕ ಅಕ್ಕನ ಬಳಗದ ವತಿಯಿಂದ ಹಾಸ್ಯ ನಾಟಕ, ಜನಪದ ಸಂಗೀತ ಕಾರ್ಯಕ್ರಮ ನಡೆದವು.