ಮತಗಟ್ಟೆ ಬಳಿ ವಾಮಾಚಾರ
ಗುಡಗೇರಿ: ಕುಂದಗೋಳ ಕ್ಷೇತ್ರದ ಗುಡಗೇರಿ ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರದ ಭಿತ್ತಿಪತ್ರದಲ್ಲಿ ವಾಮಾಚಾರದ ಸಲಕರಣೆಗಳನ್ನು ಇಟ್ಟು ಮತಕೇಂದ್ರದ ಸಮೀಪ ಇರಿಸಿದ್ದು ಚರ್ಚೆಗೆ ಗ್ರಾಸವಾಯಿತು.
ತಾಲೂಕಿನಲ್ಲಿ ಕಾಂಗ್ರೆಸ್ ಕೈಯಲ್ಲಿರುವ ಏಕೈಕ ಜಿಪಂ ಕ್ಷೇತ್ರವೆಂದರೆ ಗುಡಗೇರಿ. ಇಲ್ಲಿ ಆ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲು ವಾಮಾಚಾರ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಮತಗಟ್ಟೆ ಸಮೀಪವೇ ವಾಮಾಚಾರದ ಸಾಮಗ್ರಿಗಳಾದ ಮೊಟ್ಟೆ, ಗಡಿಗೆ, ಕುಂಕುಮ, ಅಂತ್ರ, ತಂತ್ರ ಮುಂತಾದ ವಸ್ತುಗಳನ್ನು ಇಟ್ಟು ಪೂಜೆ ಮಾಡಲಾಗಿದೆ. ಇದನ್ನು ಮತದಾನ ಆರಂಭವಾಗುವ ತುಸು ಮೊದಲು ನೋಡಿದ ಕೆಲವರು ಗ್ರಾಮದೆಲ್ಲೆಡೆ ಸುದ್ದಿ ಹರಡಿಸಿದ್ದರಿಂದ ಗ್ರಾಮಸ್ಥರು ಭೀತಿಗೊಂಡರು. ಆದರೂ ಬಳಿಕ ಮತದಾನ ಸುಸೂತ್ರವಾಗಿ ಸಾಗಿತು.